ಪಾದೂರು ಯೋಜನೆ: ಕೇಂದ್ರ ಸಚಿವರಿಗೆ ಮನವಿ

ಕಾಪು : ಸಮೀಪದ ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್‍ಪಿಆರ್‍ಎಲ್‍ನ ಎರಡನೇ ಘಟಕದ ದರ ನಿಗದಿ ಸಂಬಂಧಿಸಿ ಕೇಂದ್ರ ಸಚಿವರು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿರ್ದೇಶನ ನೀಡಿ ಸಂತ್ರಸ್ತರಿಗೆ ಮತ್ತು ಗ್ರಾಮಸ್ಥರಿಗೆ ನ್ಯಾಯ ಒದಗಿಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭರವಸೆಯನ್ನು ನೀಡಿದರು.
ಮಜೂರು ಗ್ರಾಮ ಪಂಚಾಯತ್ ಮತ್ತು ಜನಜಾಗೃತಿ ಸಮಿತಿ ಪಾದೂರು ಕಳತ್ತೂರು ಇದರ ವತಿಯಿಂದ ಐಎಸ್‍ಪಿಆರ್‍ಎಲ್ ಯೋಜನೆಯ ಬಗ್ಗೆ ನೀಡಲಾದ ಮನವಿಗೆ ಸ್ಪಂಧಿಸಿ ಅವರು ಮಾತನಾಡಿದರು.
ಐಎಸ್‍ಪಿಆರ್‍ಎಲ್ ಎರಡನೇ ಹಂತದ ಯೋಜನೆಯಲ್ಲಿ ಭೂಮಿ ಕಳೆದಕೊಳ್ಳುವ ಸಂತ್ರಸ್ತರಿಗೆ ಗರಿಷ್ಠ ದರ ನಿಗದಿಪಡಿಸುವ ಮತ್ತು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಒದಗಿಸಿ ಕೊಡುವ ಕುರಿತು ಮನವಿ ನೀಡಲಾಯಿತು.
ಉಡುಪಿ ಶಾಸಕ ರಘುಪತಿ ಭಟ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಧುಸೂಧನ್ ಸಾಲ್ಯಾನ್. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಗೀತಾಂಜಲಿ ಸುವರ್ಣ, ಜನಜಾಗೃತಿ ಸಮಿತಿ ಪಾದೂರು-ಕಳತ್ತೂರು ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ಪಂಚಾಯಿತಿ ಸದಸ್ಯ ಸಂದೀಪ್ ರಾವ್, ಪ್ರಸಾದ್ ಶೆಟ್ಟಿ ವಳದೂರು, ಪಕ್ಷದ ಪ್ರಮುಖರಾದ ನವೀನ್ ಶೆಟ್ಟಿ ಕುತ್ಯಾರು, ಉದಯಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ವೀಣಾ ಶೆಟ್ಟಿ, ಶ್ರೀಶ ನಾಯಕ್, ರಂಘನಾಥ್ ಶೆಟ್ಟಿ ಮತ್ತು ಭೂಸಂತ್ರಸ್ತರು ಉಪಸ್ಥಿತರಿದ್ದರು.







