ಅಗ್ಗದ ಪೆಟ್ರೋಲ್ ಬೇಕೇ? ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ

ರಾಮರತನ್ ಪಾಯಲ್ (Photo: Twitter)
ಪಾಟ್ನಾ: ಹಣದುಬ್ಬರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಭಾರತೀಯ ಜನತಾ ಪಕ್ಷದ ನಾಯಕ ರಾಮರತನ್ ಪಾಯಲ್ "ತಾಲಿಬಾನ್ ಗೆ ಹೋಗಿ". ಅಫ್ಘಾನಿಸ್ತಾನದಲ್ಲಿ 50 ರೂಪಾಯಿಗೆ ಇಂಧನ ಲಭ್ಯವಿದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಪಾಯಲ್ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
ಪಾಯಲ್ ಅವರ ಹೇಳಿಕೆಯ ವೀಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡುತ್ತಿದೆ.
ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ ಬುಧವಾರ ಆಯೋಜಿಸಿದ್ದ ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಪಾಯಲ್ ಈ ಹೇಳಿಕೆ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇತರ ದೇಶಗಳಲ್ಲಿನ ಪರಿಸ್ಥಿತಿಯನ್ನು ಪ್ರಸ್ತಾಪಿಸದೆ ಭಾರತದಲ್ಲಿ ಹಣದುಬ್ಬರವನ್ನು ಚರ್ಚಿಸಲು ಒತ್ತಾಯಿಸಿದ ಪಾಯಲ್, “ಕನಿಷ್ಠ ಭಾರತದಲ್ಲಿ ಸುರಕ್ಷತೆಯಿದೆ. ಕೋವಿಡ್ -19 ರ ಮೂರನೇ ಅಲೆ ನಮ್ಮನ್ನು ತಟ್ಟಲಿದೆ. ದೇಶವು ಕಠಿಣ ಸಮಯವನ್ನು ಎದುರಿಸುತ್ತಿದೆ ಹಾಗೂ ನೀವು ಪೆಟ್ರೋಲ್ ಬೆಲೆಯ ಬಗ್ಗೆ ಮಾತನಾಡುತ್ತಿದ್ದೀರಿ'' ಎಂದು ಪತ್ರಕರ್ತರನ್ನು ಪಾಯಲ್ ಪ್ರಶ್ನಿಸಿದ್ದಾರೆ.
ಪಾಯಲ್ ಅವರ ಪಕ್ಷದ ಸಹೋದ್ಯೋಗಿ, ಬಿಹಾರದ ಶಾಸಕ ಹರಿಭೂಷಣ್ ಠಾಕೂರ್, ಭಾರತದಲ್ಲಿ ನೆಲೆಸಲು ಯಾರು ಭಯಪಡುತ್ತಾರೋ ಅವರು ಅಫ್ಘಾನಿಸ್ತಾನಕ್ಕೆ ಹೋಗಬೇಕೆಂದು ಘೋಷಿಸಿದ್ದರು. ಪೆಟ್ರೋಲ್ ಹಾಗೂ ಡೀಸೆಲ್ ಅಲ್ಲಿ ಅಗ್ಗವಾಗಿದೆ ಎಂದು ಅವರು ಹೇಳಿದ್ದಾರೆ.
"ಭಾರತದ ಅನೇಕ ಜನರು ನಮ್ಮ ಸರಕಾರದ ನೀತಿಗಳಿಗೆ ವಿರುದ್ಧವಾಗಿದ್ದಾರೆ. ಇಂಧನ ಬೆಲೆ ಏರಿಕೆಯ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ದೇಶದಲ್ಲಿ ಇಂಧನ ಬೆಲೆಗಳು ಹೆಚ್ಚಿವೆ. ಆದರೆ ಭಾರತದ ಸ್ಥಿತಿ ಇತರ ದೇಶಗಳಿಗಿಂತ ಉತ್ತಮವಾಗಿವೆ. ಇಲ್ಲಿ ವಾಸಿಸುತ್ತಿರುವ ಯಾರಿಗಾದರೂ ಸಮಸ್ಯೆಗಳಿದ್ದರೆ ಅವರು ಅಫ್ಘಾನಿಸ್ತಾನಕ್ಕೆ ಹೋಗಿ. ಅಲ್ಲಿ ಕಡಿಮೆ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಿಗುತ್ತದೆ "ಎಂದು ಅವರು ಹೇಳಿದರು.
Reporter : What do you have to say about Inflation?
— Mohammed Zubair (@zoo_bear) August 19, 2021
BJP leader : "Go to Afghanistan, Petrol is ₹50/ltr there, There's no one to fill petrol there. It's atleast peaceful here"pic.twitter.com/dNgpl8kALv







