ಟ್ಯಾಲೆಂಟ್ ಅಕಾಡಮಿಕ್ ಎಕ್ಸಲೆನ್ಸಿ ಎವಾರ್ಡ್ - 2021: ಅರ್ಜಿ ಆಹ್ವಾನ
![ಟ್ಯಾಲೆಂಟ್ ಅಕಾಡಮಿಕ್ ಎಕ್ಸಲೆನ್ಸಿ ಎವಾರ್ಡ್ - 2021: ಅರ್ಜಿ ಆಹ್ವಾನ ಟ್ಯಾಲೆಂಟ್ ಅಕಾಡಮಿಕ್ ಎಕ್ಸಲೆನ್ಸಿ ಎವಾರ್ಡ್ - 2021: ಅರ್ಜಿ ಆಹ್ವಾನ](https://www.varthabharati.in/sites/default/files/images/articles/2021/08/20/303448-1629478691.jpeg)
ಮಂಗಳೂರು : ಶಾಲೆ ಮತ್ತು ಕಾಲೇಜು, ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಟ್ಯಾಲೆಂಟ್ ವತಿಯಿಂದ ವರ್ಷಂಪ್ರತಿ ನಡೆಸುತ್ತಾ ಬಂದಿರುವ ಪ್ರಶಸ್ತಿ ನೀಡುವ ಕಾರ್ಯಕ್ರಮವು ಈ ಬಾರಿಯೂ ಟ್ಯಾಲೆಂಟ್ ರಿರ್ಸಚ್ ಫೌಂಡೇಶನ್ ಎಸೆಸೆಲ್ಸಿ ಮತ್ತು ಪಿಯುಸಿಯ 2020-21ನೇ ಸಾಲಿನ ಪಬ್ಲಿಕ್ ಪರಿಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಅಕಾಡೆಮಿಕ್ ಎಕ್ಸಲೆನ್ಸಿ ಎವಾರ್ಡ್-2021 ಪ್ರಶಸ್ತಿ ನೀಡಿ ಗೌರವಿಸಲಾಗುವುದು.
10ನೇ ತರಗತಿಯ ಅನುದಾನಿತ ಮತ್ತು ಅನುದಾನರಹಿತ ಟಾಪ್ 4 ಹಾಗೂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟಾಪ್ 2, ದ್ವಿತೀಯ ಪಿ.ಯು.ಸಿಯ ಕಲಾ ವಿಭಾಗ-3, ವಾಣಿಜ್ಯ ವಿಭಾಗ-3 ಮತ್ತು ವಿಜಾÐನ ವಿಭಾಗ-3 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.
ಅರ್ಹತೆಗಳು : ದ.ಕ ಜಿಲ್ಲೆಯ ಎಸೆಸೆಸಿಯಲ್ಲಿ 600 ಮತ್ತು ಪಿಯುಸಿಯಲ್ಲಿ 575 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಎಸೆಸೆಸಿ ಮತ್ತು ಪಿಯುಸಿ ಅಂಕಪಟ್ಟಿಗೆ ಶಾಲೆ, ಕಾಲೇಜು ಧೃಡೀಕರಣ, ಪೊಟೋ, ವಿಳಾಸ, ಮತ್ತು ಮೂಬೈಲ್ ಸಂಖ್ಯೆ ಕಡ್ಡಾಯವಾಗಿ ಲಗತ್ತಿಸುವುದು. ಅರ್ಜಿಯನ್ನು ವಿದ್ಯಾರ್ಥಿ ವ್ಯಯಕ್ತಿಕವಾಗಿ ಅಥವಾ ಇತರರು ಖದ್ದಾಗಿ ಅಂಚೆ ಮೂಲಕ ಅಥವಾ ಇ-ಮೇಲ್ ಮತ್ತು ವಾಟ್ಸಪ್ ಮೂಲಕ ಕಳುಹಿಸಬಹುದು. ಬಂದ ಅರ್ಜಿಗಳಲ್ಲಿ ಅತ್ಯಧಿಕ ಅಂಕ ಪಡೆದವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಲು 30-08-2021 ಕೊನೆಯ ದಿನ. ಪ್ರಶಸ್ತಿಗೆ ಅರ್ಹ ವಿದ್ಯಾರ್ಥಿಗಳ ಅರ್ಜಿಗಳನ್ನು ಕಳುಹಿಸಿಕೊಡುವಂತೆ ದ.ಕ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ಸಂಘ ಸಂಸ್ಥೆಗಳು, ಅಧ್ಯಾಪಕರು ಮತ್ತು ಪೋಷಕರಲ್ಲಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಯೆನೆಪೋಯ ನರ್ಸಿಂಗ್ ಹೋಮ್ ಎದುರುಗಡೆ, ಕಂಕನಾಡಿ, ಮಂಗಳೂರು
9844773906, 9148219683, ಇ-ಮೇಲ್ : trfmangalore@gmail.com ಸಂಪರ್ಕಿಸಬಹುದು.