ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಸ್ಥಗಿತ: ಭಾರತಕ್ಕೆ ಪಾಕ್ ಆಗ್ರಹ
ಇಸ್ಲಮಾಬಾದ್, ಆ.20: ಜಮ್ಮು-ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ಕಿಶನ್ ಗಂಗ್ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಪಾಕಿಸ್ತಾನ ಆಗ್ರಹಿಸಿದೆ.
ಝೀಲಂ ಮತ್ತು ಚೆನಾಬ್ ನದಿ ನೀರಿನಲ್ಲಿ ನಿರ್ಮಿಸುತ್ತಿರುವ ಯೋಜನೆಗಳನ್ನು ತಕ್ಷಣ ಸ್ಥಗಿತಗೊಳಿಸಲು ಭಾರತವನ್ನು ಆಗ್ರಹಿಸುವ ನಿರ್ಣಯವನ್ನು ಪಾಕಿಸ್ತಾನದ 2 ಸಂಸತ್ ಸಮಿತಿಗಳು ಕೈಗೊಂಡಿವೆ. ಸಂಸತ್ತಿನಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಈ ಆಗ್ರಹ ಮಾಡಲಾಗಿದ್ದು ಜೊತೆಗೆ ಉಭಯ ದೇಶಗಳ ನಡುವಿನ ನೀರಿನ ಒಪ್ಪಂದದ ಕುರಿತ ವಿವಾದ ಬಗೆಹರಿಸಲು ನ್ಯಾಯಮಂಡಳಿಯನ್ನು ರಚಿಸುವಂತೆ ವಿಶ್ವಬ್ಯಾಂಕ್ ಗೆ ಮನವಿ ಸಲ್ಲಿಸಲಾಗಿದೆ.
ನ್ಯಾಯಮಂಡಳಿ ರಚನೆಯಾಗುವವರೆಗೆ, ಭಾರತ ಈಗ ನಡೆಸುತ್ತಿರುವ ಕಿಶನ್ ಗಂಗ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆ ಸ್ಥಗಿತಗೊಳಿಸುವಂತೆ ಭಾರತದ ಮನ ಒಲಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಸರಕಾರದ ಮತ್ತು ವಿಪಕ್ಷದ ಸದಸ್ಯರುಳ್ಳ ಸಮಿತಿ ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ವರದಿಯಾಗಿದೆ.
Next Story





