ಮಂಗಳೂರು: ರೈಲು ಢಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತ್ಯು

ಪ್ರೇಮಾ, ವಸಂತಿ
ಮಂಗಳೂರು, ಆ.21: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಜಪ್ಪು ಮಹಾಕಾಳಿಪಡ್ಪು ಬಳಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಸ್ಥಳೀಯ ನಿವಾಸಿಗಳಾದ ವಸಂತಿ (50) ಮತ್ತು ಪ್ರೇಮಾ (48) ಮೃತಪಟ್ಟವರು.
ಬೀಡಿ ಕಾರ್ಮಿಕರಾಗಿದ್ದ ಇವರಿಬ್ಬರು ದಿನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬ್ರ್ಯಾಂಚ್ ಗೆ ರೈಲು ಹಳಿಯನ್ನು ದಾಟಿ ಬೀಡಿ ಕೊಂಡೊಯ್ಯುತ್ತಿದ್ದರು. ಅದರಂತೆ ಇಂದು ಬೆಳಗ್ಗೆಯೂ ಹಳಿ ದಾಟುತ್ತಿದ್ದಾಗ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಳಿ ದಾಟುತ್ತಿದ್ದ ವೇಳೆ ರೈಲು ಬರುತ್ತಿದ್ದದು ಮಹಿಳೆಯರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Next Story





