ಉಳ್ಳಾಲದ ಯುವಕ ನಾಪತ್ತೆ : ನೇತ್ರಾವತಿ ಸೇತುವೆಯ ಬಳಿ ದ್ವಿಚಕ್ರ ವಾಹನ ಪತ್ತೆ

ಮಂಗಳೂರು, ಆ. 21: ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ (21) ಎಂಬವರು ಶುಕ್ರವಾರದಿಂದ ಕಾಣೆಯಾಗಿದ್ದು, ಇದೀಗ ಆತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವು ಉಳ್ಳಾಲದ ನೇತ್ರಾವತಿ ನದಿ ರೈಲ್ವೆ ಬ್ರಿಡ್ಜ್ ಬಳಿ ಪತ್ತೆಯಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ. ರಾತ್ರಿಯಾದರೂ ಮರಳಿ ಬಾರದ ಕಾರಣ ಮನೆಮಂದಿ ಹುಡುಕಾಟ ಆರಂಭಿಸಿದ್ದಾರೆ.
ಶನಿವಾರ ಬೆಳಗ್ಗೆ ನೇತ್ರಾವತಿ ರೈಲ್ವೆ ಬ್ರಿಡ್ಜ್ ಬಳಿ ಹಫೀಝ್‌ನ ಮೊಬೈಲ್, ಚಪ್ಪಲಿ ಮತ್ತು ದ್ವಿಚಕ್ರ ವಾಹನ ಪತ್ತೆಯಾಗಿದೆ. ಅದರಂತೆ ಉಳ್ಳಾಲ ಪೊಲೀಸರು, ಅಗ್ನಿಶಾಮಕದಳ ಮತ್ತು ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





