Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆ.22ರಂದು ಶ್ರಾವಣ ಹುಣ್ಣಿಮೆ...

ಆ.22ರಂದು ಶ್ರಾವಣ ಹುಣ್ಣಿಮೆ ಚಂದ್ರನೊಂದಿಗೆ ಗುರು ಗ್ರಹದ ಹುಣ್ಣಿಮೆ

ವಾರ್ತಾಭಾರತಿವಾರ್ತಾಭಾರತಿ21 Aug 2021 6:22 PM IST
share
ಆ.22ರಂದು ಶ್ರಾವಣ ಹುಣ್ಣಿಮೆ ಚಂದ್ರನೊಂದಿಗೆ ಗುರು ಗ್ರಹದ ಹುಣ್ಣಿಮೆ

ಉಡುಪಿ, ಆ.21:  ರವಿವಾರ ಶ್ರಾವಣ ಹುಣ್ಣಿಮೆ. ನಮಗೆಲ್ಲಾ ತಿಳಿದಿ ರುವಂತೆ ಹುಣ್ಣಿಮೆಯ ದಿನ ಸಂಪೂರ್ಣ ಚಂದ್ರ, ಇಡೀ ರಾತ್ರಿ ಕಾಣುತ್ತದೆ. ಸಂಜೆಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಚಂದ್ರೋದಯ. ಇಡೀ ರಾತ್ರಿ ಆಕಾಶದಲ್ಲಿ ತಿರುಗುತ್ತಾ ಮುಂದಿನ ದಿನದ ಸೂರ್ಯೋದಯಕ್ಕೆ ಚಂದ್ರ ಅಸ್ತನಾಗುತ್ತಾನೆ.

ಇದೇ ರೀತಿ ವರ್ಷದಲ್ಲಿ ಕೆಲವು ದಿನ ಗುರುಗ್ರಹವೂ ಇಡೀ ರಾತ್ರಿ ಕಾಣುತ್ತದೆ. ಸಂಜೆಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಉದಯಿಸಿ ಮುಂದಿನ ದಿನ ಸೂರ್ಯೋದಯಕ್ಕೆ ಅಸ್ತ. ಆ.22ರ ರವಿವಾರ ಶ್ರವಣ ನಕ್ಷತ್ರದ ಪಕ್ಕದಲ್ಲಿ ಚಂದ್ರನಿರುತ್ತದೆ. ಹೀಗಾಗಿ ಇದು ಶ್ರಾವಣ ಹುಣ್ಣಿಮೆ.

ರವಿವಾರ ಮತ್ತೊಂದು ವಿಶೇಷವೆಂದರೆ ಚಂದ್ರ ಹಾಗೂ ಗುರು ಗ್ರಹಗಳು ಜೊತೆ ಜೊತೆಗೆ ಹುಣ್ಣಿಮೆ ಆಚರಿಸುತ್ತವೆ.ಇದೊಂದು ಅಪರೂಪದ ವಿದ್ಯಮಾನ. ಚಂದ್ರ, ಗುರು ಗ್ರಹ ಹಾಗೂ ಶ್ರಾವಣ ನಕ್ಷತ್ರ ಜೊತೆಜೊತೆಗೆ ಕಾಣುತ್ತಿವೆ. ದೂರ ದರ್ಶಕದಲ್ಲಿ ಗುರು ಗ್ರಹವನ್ನು ನೋಡಲು ಇಡೀ ವರ್ಷದಲ್ಲೇ ಈ ತಿಂಗಳಿಡೀ ಒಳ್ಳೆಯ ಅವಕಾಶ. ಇದನ್ನು ನೋಡಿ ಆನಂದಿಸಬಹುದಾಗಿದೆ.

ಆಕಾಶದಲ್ಲಿ ನೋಡುವಾಗ ಚಂದ್ರ, ಗುರುಗ್ರಹಕ್ಕಿಂತ ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಕಾರಣ ಚಂದ್ರ, ಗುರು ಗ್ರಹಕ್ಕಿಂತ ಚಿಕ್ಕದಾಗಿದ್ದರೂ ಭೂಮಿಗೆ ತುಂಬಾ ಹತ್ತಿರವಿದೆ. ವಾಸ್ತವವಾಗಿ ಚಂದ್ರ ಈ ದಿನ 3ಲಕ್ಷದ 74 ಸಾವಿರದ 484 ಕಿಮೀ ದೂರದಲ್ಲಿದ್ದರೆ, ಗುರುಗ್ರಹ ಭೂಮಿಯಿಂದ 36 ಕೋಟಿ 50 ಲಕ್ಷ ಕಿಮೀ ದೂರದಲ್ಲಿದೆ. ಸುಮಾರು ಒಂದು ಸಾವಿರ ಪಟ್ಟು ಆಳದಲ್ಲಿದೆ ಗುರುಗ್ರಹ. ಚಂದ್ರನಿಗಿಂತ ಗುರುಗ್ರಹ ಅದೆಷ್ಟು ದೊಡ್ಡದೆಂದರೆ ಗುರುಗ್ರಹದ ಹೊಟ್ಟೆ ಖಾಲಿಯಾಗಿದ್ದರೆ ಅದರಲ್ಲಿ 60 ಸಾವಿರದಷ್ಟು ಚಂದ್ರರನ್ನು ತುಂಬಬಹುದು!.

''ಶ್ರಾವಣ ಮಾಸವೆಂದರೆ ಹುಣ್ಣಿಮೆ ಚಂದ್ರ, ಆ ದಿನ ಶ್ರವಣ ನಕ್ಷತ್ರದ ಪಕ್ಕದಲ್ಲಿ ಇರುವುದು. ಈ ಶ್ರವಣ ನಕ್ಷತ್ರವೋ ಭೂಮಿಯಿಂದ ಸುಮಾರು 16.7 ಜ್ಯೋತಿರ್ವರ್ಷ ದೂರದಲ್ಲಿದೆ. ಒಂದು ಜ್ಯೋತಿರ್ವರ್ಷವೆಂದರೆ ಸುಮಾರು ಒಂದು ಲಕ್ಷ ಕೋಟಿ ಕಿಮೀ (946 ಬಿಲಿಯನ್ ಕಿಮೀ.). ಈ ನಕ್ಷತ್ರ ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದು. ಹೀಗಾಗಿ ಈ ನಕ್ಷತ್ರದಲ್ಲಿ 8000 ಗುರು ಗ್ರಹಗಳನ್ನು ತುಂಬಬಹುದು. (ನಮ್ಮ ಸೂರ್ಯ ನಮ್ಮ ಗುರು ಗ್ರಹಕ್ಕಿಂತ 1000 ಪಟ್ಟು ದೊಡ್ಡದು.) ಆಶ್ಚರ್ಯವಲ್ಲವೇ ಈ ಖಗೋಳ ವಿಶ್ವ. ಇಂದಿನ ದಿನ ಶ್ರವಣ ನಕ್ಷತ್ರ, ಚಂದ್ರ ಹಾಗೂ ಗುರು ಗ್ರಹ ಅಕ್ಕಪಕ್ಕದಲ್ಲಿ ಕಾಣಲಿವೆ''.

-ಡಾ.ಎ.ಪಿ.ಭಟ್, ನಿವೃತ್ತ ಪ್ರಾಂಶುಪಾಲ, ಪಿಪಿಸಿ ಉಡುಪಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X