ಉಡುಪಿ: ಆ.22ರಂದು ಕೊರೋನ ಲಸಿಕೆ ಲಭ್ಯತೆ ವಿವರ
ಉಡುಪಿ, ಆ.21: ಉಡುಪಿ ಜಿಲ್ಲೆಯಲ್ಲಿ ಆ.22ರಂದು ಮೊದಲ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ಲಭ್ಯವಿದ್ದು, ವಿವರ ಈ ಕೆಳಕಂಡಂತಿದೆ.
ಉಡುಪಿ ನಗರ ಪ್ರದೇಶದ ದೊಡ್ಡಣಗುಡ್ಡೆ ವ್ಯಾಯಾಮ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್-100 ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆ ಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಪಡೆಯಬಹುದು ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story