ಉಡುಪಿ: ಸಚಿವ ಸುನೀಲ್ ಕುಮಾರ್ ಪ್ರವಾಸ
ಉಡುಪಿ, ಆ.21: ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಆ.23ರವರೆಗೆ ಜಿಲ್ಲಾ ಪ್ರವಾಸದಲ್ಲಿರು ತ್ತಾರೆ. ಆ.22 ರಂದು ಬೆಳಗ್ಗೆ 8 ರಿಂದ ಕಾರ್ಕಳದಲ್ಲಿ ಕಾರ್ಯಕ್ರಮ, ಸಂಜೆ 4 ಕ್ಕೆ ಅತ್ತೂರು ಪರ್ಪಲೆಗಿರಿಗೆ ಭೇಟಿ, 5:15ಕ್ಕೆ ಮಾರ್ಕೆಟ್ ರಸ್ತೆ-ರಾಣೆಯರ ಕಾಲನಿ ಆವರಣ ದಲ್ಲಿ ಅಖಿಲ ಭಾರತ ರಾಣೆಯರ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ಮತ್ತು ಬಡ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ. ರಾತ್ರಿ ಕಾರ್ಕಳದಲ್ಲಿ ವಾಸ್ತವ್ಯ.
ಆ.23ರಂದು ಬೆಳಿಗ್ಗೆ 9:30ಕ್ಕೆ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ರಾಜ್ಯಮಟ್ಟದ ನಾರಾಯಣ ಗುರು ಜಯಂತಿ ಕಾರ್ಯಕ್ರಮ, 11:15ಕ್ಕೆ ಅಜೆಕಾರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ, 12:30ಕ್ಕೆ ಬಂಡೀಮಠದಲ್ಲಿ ಬಂಡಿಮಠ- ವಿಕಾಸ ಸೇವಾ ಸಂಸ್ಥೆ ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಸಹಭಾಗಿತ್ವದಲ್ಲಿ ಪಾಸಿಂಗ್ ಕಾರ್ಯಕ್ರಮಕ್ಕೆ ಚಾಲನೆ, ಅಪರಾಹ್ನ 2:30ಕ್ಕೆ ಹಿರಿಯಡ್ಕ ಬಿಲ್ಲವ ಸಂಘಕ್ಕೆ ಭೇಟಿ, 3:15ಕ್ಕೆ ಮಿಷನ್ ಕಂಪೌಂಡ್ ಆಶಾ ನಿಲಯ ವಿಶೇಷ ಶಾಲೆಯಲ್ಲಿ ವಿಕಲ ಚೇತನರ ಇಲಾಖೆ ಉಡುಪಿ ಇವರ ವತಿಯಿಂದ ಅರ್ಹ ವಿಕಲ ಚೇತನರಿಗೆ ತ್ರಿಚಕ್ರ ವಾಹನ ಹಸ್ತಾಂತರ, ಸಂಜೆ 4 ಗಂಟೆಗೆ ಬ್ರಹ್ಮಾವರ ಬಿಜೆಪಿ ಕಚೇರಿ ಭೇಟಿ, 5 ಗಂಟೆಗೆ ಕಾಪು ಬಿಜೆಪಿ ಕಚೇರಿ ಭೇಟಿ ನೀಡಲಿದ್ದು, ನಂತರ ಬೆಂಗಳೂರಿಗೆ ತೆರಳಲಿದ್ದಾರೆ.





