ದ.ಕ.ಜಿಲ್ಲೆಯಲ್ಲಿ 25,042 ಮಂದಿಗೆ ಕೋವಿಡ್ ಲಸಿಕೆ
ಮಂಗಳೂರು, ಆ.21: ದ.ಕ.ಜಿಲ್ಲಾಡಳಿತವು ಜಿಲ್ಲೆಯಲ್ಲಿ ಶನಿವಾರ 25,042 ಮಂದಿಗೆ ಕೋವಿಡ್ ಪ್ರತಿರೋಧ ಲಸಿಕೆ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ ಅಂದರೆ 17,717ಮತ್ತು ಸುಳ್ಯದಲ್ಲಿ ಅತೀ ಕಡಿಮೆ ಅಂದರೆ 2,384 ಮಂದಿ ಲಸಿಕೆ ಪಡೆದಿದ್ದಾರೆ. ಉಳಿದಂತೆ ಬಂಟ್ವಾಳದಲ್ಲಿ 5,232, ಪುತ್ತೂರಿನಲ್ಲಿ 3,838, ಬೆಳ್ತಂಗಡಿಯಲ್ಲಿ 2,871 ಮಂದಿ ಲಸಿಕೆ ಪಡೆದಿದ್ದಾರೆ.
Next Story