ಜಾಲತಾಣಗಳಲ್ಲಿ ತಾಲಿಬಾನ್ ಪರ ಪೋಸ್ಟ್: ಅಸ್ಸಾಂನಲ್ಲಿ 14 ಮಂದಿ ಬಂಧನ

ಹೊಸದಿಲ್ಲಿ, ಆ.21: ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನ್ ಪರ ಪೋಸ್ಟ್ಗಳನ್ನು ಮಾಡಿದ್ದಾರೆನ್ನಲಾದ 14 ಮಂದಿಯನ್ನು ಅಸ್ಸಾಂನ ವಿವಿಧೆಡೆ ಬಂಧಿಸಲಾಗಿದೆಯೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರದಿಂದೀಚೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ವಿವಿಧ ಸೆಕ್ಷನ್ಗಳು ಹಾಗೂ ಮಾಹಿತಿತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಕಟ್ಟೆಚ್ಚರದಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಪೋಸ್ಟ್ ಗಳ ಮೇಲೆ ನಿಗಾವಿರಿಸಲಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ತಾಲಿಬಾನ್ ಪರ ಪೋಸ್ಟ್ ಗಳ ವಿರುದ್ಧ ಅಸ್ಸಾಂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದು ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಸ್ಸಾಂನ ಪೊಲೀಸ್ ಉಪಮಹಾನಿರೀಕ್ಷಕ ವಾಯೊಲೆಟ್ ಬರುವಾ ತಿಳಿಸಿದ್ದಾರೆ.
Next Story





