ಬೆಂಗಳೂರು: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ.22ರಂದು ಉಪನ್ಯಾಸ ಕಾರ್ಯಕ್ರಮ

ಬೆಂಗಳೂರು: ಸ್ವಾತಂತ್ರ್ಯದ ಎಪ್ಪತ್ತೈದನೇ ವರ್ಷಾಚರಣೆಯ ಪ್ರಯುಕ್ತ 'ಸ್ವಾತಂತ್ರ್ಯಾ ನಂತರದಲ್ಲಿ'…ಎಂಬ ಶೀರ್ಷಿಕೆಯಿಟ್ಟುಕೊಂಡು ಭಾರತ ಜ್ಞಾನ ವಿಜ್ಞಾನ ಸಮಿತಿ- ಕರ್ನಾಟಕವು ವರ್ಷವಿಡೀ ಮರುನೋಟ ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತಿದೆ.
ರವಿವಾರ(ಆ.22) ಸಂಜೆ 6 ಗಂಟೆಗೆ ನಡೆಯಲಿರುವ ಆರಂಭಿಕ ಉಪನ್ಯಾಸದಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಇರ್ಫಾನ್ ಹಬೀಬ್ ಭಾಗವಹಿಸುತ್ತಾರೆ. ಸ್ವಾತಂತೋತ್ತರ ಭಾರತದಲ್ಲಿನ ಧರ್ಮನಿರಪೇಕ್ಷತೆ ಮತ್ತು ಪ್ರಜಾಪ್ರಭುತ್ವದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಜೆಎನ್ ಯು ವಿಶ್ವ ವಿದ್ಯಾನಿಲಯದ ಕನ್ನಡ ಪೀಠದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಹಬೀಬ್ ಅವರೊಡನೆ ಸಂವಾದಿಸಲಿದ್ದಾರೆ.
ಸ್ವಾತಂತ್ರ್ಯದ ಎಪ್ಪತ್ರೈದು ವರ್ಷಗಳ ನಮ್ಮ ನೆನಪುಗಳು, ನಮ್ಮ ದಾರಿ, ನಮ್ಮ ನಿಲ್ದಾಣಗಳೆಲ್ಲವೂ ನಮ್ಮ ಪಯಣದ ಸಾರ್ಥಕತೆಯನ್ನು ತಿಳಿಸಲಿವೆ ಹಾಗೂ ನಮ್ಮ ಗುರಿಗಳನ್ನು ಮರು ವಿಮರ್ಶೆಗೂ ಒಳಪಡಿಸುತ್ತವೆ ಎಂಬ ಆಶಯ ನಮ್ಮದು ಎಂದು ಭಾರತ್ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.







