ಕೊಡಗು: ಸಾವಿನಲ್ಲೂ ಸಾರ್ಥಕತೆ ಮೆರೆದ ಶೋಭಾ ಚೆಂಗಪ್ಪ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದ ನಿವಾಸಿ ಮಾಳೇಟಿರ ಕಿರಣ್ ಅವರ ಪತ್ನಿ ಶೋಭಾ ಚೆಂಗಪ್ಪ (48) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅನಾರೋಗ್ಯದಿಂದ ಶೋಭ ಅವರ ಮೆದುಳು ನಿಶಿಕ್ರಿಯಗೊಂಡಿತ್ತು. ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಕುಟುಂಬದ ಸದಸ್ಯರು ನೋವಿನ ನಡುವೆಯೂ ದೊಡ್ಡತನ ಮೆರೆದಿದ್ದಾರೆ. ಮೈಸೂರಿನ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೋಭಾ ಚೇತರಿಸಿಕೊಳ್ಳುವುದು ಅಸಾಧ್ಯವೆಂದು ಖಾತ್ರಿಯಾದ ನಂತರ ಅಂಗಾಂಗ ದಾನ ಮಾಡಲಾಯಿತು.
ಕಾರ್ನಿಯಾ, ಹೃದಯ ಕವಾಟಗಳು, ಲಿವರ್ ಹಾಗೂ ಕಿಡ್ನಿಗಳನ್ನು ದಾನ ಮಾಡಲಾಗಿದೆ.
Next Story





