ಇನೋಳಿ ದೇವಸ್ಥಾನದಲ್ಲಿ ಗೃಹರಕ್ಷಕ ದಳದಿಂದ ಸ್ವಚ್ಛತಾ ಶ್ರಮಾದಾನ

ಮಂಗಳೂರು : ಹಿಂದೆಯೂ ದೇವಸ್ಥಾನದ ಪರಿಸರ ಸ್ವಚ್ಛತಾ ಕೆಲಸ ನಡೆಸಲಾಗಿದ್ದು, ಇದೀಗ ಸ್ವಚ್ಛತೆ ಜೊತೆಗೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಗಿಡಗಳನ್ನು ನೆಡುವ ಮೂಲಕ ದೇವರ ಸೇವೆ ಮಾಡುತ್ತಿದ್ದೇವೆ. ಮುಂದೆಯೂ ಅವಕಾಶ ಸಿಕ್ಕಾಗ ಇನ್ನಷ್ಟು ಸೇವೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠ ಡಾ. ಮುರಳೀ ಮೋಹನ್ ಚೂಂತಾರು ತಿಳಿಸಿದ್ದಾರೆ.
ಇನೋಳಿ ದೇವಂದ ಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ಗೃಹರಕ್ಷಕ ದಳದಿಂದ ನಡೆದ ಸ್ವಚ್ಛತಾ ಶ್ರಮಾದಾನ, ಬಿಲ್ವಪತ್ರೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾ ಸ ಪೂಂಜ ಮಾತನಾಡಿ, ಈ ದೇವಸ್ಥಾನದಲ್ಲಿ ಸೇವ ಸಲ್ಲಿಸಲು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಬರುತ್ತಲೇ ಇರುತ್ತಾರೆ. ಮೂರು ವರ್ಷಗಳ ಹಿಂದೆಯೂ ಗೃಹರಕ್ಷಕ ದಳದವರು ಬಂದು ಶ್ರಮಾದಾನ ನಡೆಸಿದ್ದು, ಈಗ ಎರಡನೇ ಬಾರಿ ಬಂದಿರುವುದು ಸಂತಸ ವಾಗಿದೆ. ಮುಂದೆಯೂ ಅಗತ್ಯ ಸಹಕಾರ ನೀಡುವ ಮೂಲಕ ದೇವಸ್ಥಾನದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಪರಿಸರ ಪ್ರೇಮಿಗಳಾದ ಮಾಧವ ಉಳ್ಳಾಲ್, ರಾಕೇಶ್, ದೇವಸ್ಥಾನದ ಕಾರ್ಯದರ್ಶಿ ಶ್ರೀನಿ ವಾಸ ಇನೋಳಿ, ಟ್ರಸ್ಟಿಗಳಾದ ಗೋಪಾಲ ಶೆಟ್ಟಿ ಬಾರ್ಲ, ಪ್ರಭಾ ಕರ ನಾಯಕ್, ಸೇವಾ ಸಮಿತಿಯ ಸದಸ್ಯರಾ ದ ಕಿರಣ್ ಶೆಟ್ಟಿ ಕಿಲ್ಲೂರು ಲಕ್ಕೆ, ಗೋಪಾಲ ಕೋರ್ಯ, ಸಂದೇಶ ಪೊರ್ಸೋಟ, ಪ್ರವೀಣ್, ಕರುಣಾಕರ ಶೆಟ್ಟಿ ದೇವರ ಗುಡ್ಡೆ, ಸುಜಿ ತ್ ಇನೋಳಿ, ಘಟಕಾಧಿಕಾರಿ ಬಾಸ್ಕರ್, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.
ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರು ಗುತ್ತು ಸ್ವಾಗತಿಸಿದರು.







