ಶತಾಯುಷಿ ಗುರುವ ಕೊರಗ ನಿಧನಕ್ಕೆ ಸಚಿವ ಸುನೀಲ್ ಕುಮಾರ್ ಸಂತಾಪ

ಸುನೀಲ್ ಕುಮಾರ್
ಉಡುಪಿ, ಆ.22: ನಾಡಿನ ಹಿರಿಯ ಜನಪದ ಕಲಾವಿದರಾಗಿದ್ದ ಗುರುವ ಕೊರಗ (105) ಅವರ ನಿಧನದಿಂದ ನಾಡಿನ ಸಾಂಸ್ಕೃತಿಕ ಮತ್ತು ಜನಪದ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಸಮಾಜದ ಕಟ್ಟಕಡೆಯ ಸಮುದಾಯದಿಂದ ಬಂದ ಅವರು ತಮ್ಮ ಪರಂಪರಾಗತ ಡೋಲು ವಾದನ ಕಲೆಯನ್ನು ಮೈಗೂಡಿಸಿಕೊಂಡು ತಮ್ಮ ಆಯಸ್ಸಿನ ಕೊನೆಯವರೆಗೂ ಅದನ್ನು ಮುಂದುವರಿಸಿಕೊಂಡು ಬಂದು, ನೂರಾರು ಮಂದಿಗೆ ಆ ವಿದ್ಯೆಯನ್ನು ಧಾರೆಯೆರೆದು, ಪೋಷಿಸಿದ ಅವರ ಕಾಳಜಿ ಸ್ಮರಣೀಯವಾದುದು. ಯಾವುದೇ ದುರಾಭ್ಯಾಸಗಳಿಲ್ಲದೇ ಶತಮಾನವನ್ನು ಪೂರೈಸಿದ ಅವರ ಬದುಕಿನ ರೀತಿನೀತಿ ಕಲಾವಿದ ರೆಲ್ಲರಿಗೂ ಆದರ್ಶವಾದುದುದು. ಅವರ ಕಲಾಸೇವೆಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಜನಪದ ಶ್ರೀ ಪ್ರಶಸ್ತಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಂದ ಗೌರವಿಸಲಾಗಿತ್ತು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಮನೆಯವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಸುವ ಶಕ್ತಿಯನ್ನು ನೀಡಲಿ ಎಂದು ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ.





