ಮಣಿಪುರದ ನೂತನ ರಾಜ್ಯಪಾಲರಾಗಿ ಹಿರಿಯ ಬಿಜೆಪಿ ನಾಯಕ ಲಾ.ಗಣೇಶನ್ ನೇಮಕ

photo: Twitter/@LaGanesan
ಹೊಸದಿಲ್ಲಿ: ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಲಾ.ಗಣೇಶನ್ ಅವರನ್ನು ರವಿವಾರ ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
ಈ ತಿಂಗಳ ಆರಂಭದಲ್ಲಿ ನಜ್ಮಾ ಹೆಪ್ತುಲ್ಲಾ ಅವರ ನಿವೃತ್ತಿಯ ನಂತರ ರಾಜ್ಯಪಾಲರ ಹುದ್ದೆಯು ಖಾಲಿಯಾಗಿತ್ತು.
“ಗಣೇಶನ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮಣಿಪುರದ ನೂತನ ರಾಜ್ಯಪಾಲರಾಗಲಿದ್ದಾರೆ" ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 10 ರಂದು ಹೆಪ್ತುಲ್ಲಾ ಕಚೇರಿಯನ್ನು ತೊರೆದರು ಹಾಗೂ ಅದೇ ದಿನ ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಯಿತು.
Next Story





