ಕಳವು ಪ್ರಕರಣ ಭೇದಿಸಿದ ಆಗ್ನೇಯ ವಿಭಾಗ ಪೊಲೀಸರು: 7 ಕೋಟಿ 81 ಲಕ್ಷ ರೂ.ಮೌಲ್ಯದ ಮಾಲು ಜಪ್ತಿ

ಬೆಂಗಳೂರು, ಆ. 22: ಮಾದಕ ವಸ್ತು ಮಾರಾಟ, ಕಳವು ಪ್ರಕರಣ ಸೇರಿದಂತೆ 36 ಗಂಭೀರ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು 7 ಕೋಟಿ 81 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.
ಪತ್ತೆ ಹಚ್ಚಿದ 36 ಪ್ರಕರಣಗಳಲ್ಲಿ ರಾಜ್ಯವಲ್ಲದೆ ತಮಿಳುನಾಡು, ಕೇರಳ, ರಾಜಸ್ತಾನ ಸೇರಿದಂತೆ ಅಂತರ್‍ರಾಜ್ಯದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 7 ಕೋಟಿ 81 ಲಕ್ಷ ಮೌಲ್ಯದ 1 ಬಿಎಂಡಬ್ಲ್ಯು ಕಾರು, 19 ದ್ವಿಚಕ್ರ ವಾಹನ, 210 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ, 250 ಗ್ರಾಂ ಅಫೀಮು, 33 ಲಕ್ಷ ಮೌಲ್ಯದ ಖೋಟಾನೋಟುಗಳು, 5 ಕೆಜಿ 100 ಗ್ರಾಂ ತಿಮಿಂಗಿಲದ ವಾಂತಿಯ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ತೆ ಹಚ್ಚಿರುವ 36 ಪ್ರಕರಣಗಳಲ್ಲಿ ಬೇಗೂರು 15, ಪರಪ್ಪನ ಅಗ್ರಹಾರ 3, ಎಸ್‍ಜಿ ಪಾಳ್ಯ 8, ಮೈಕೋಲೇಔಟ್ 8, ಹುಳಿಮಾವು, ಎಲೆಕ್ಟ್ರಾನಿಕ್ ತಲಾ 1 ಪ್ರಕರಣಗಳು ಸೇರಿವೆ ಎಂದು ಅವರು ವಿವರಿಸಿದರು.
Next Story





