ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ, ಆ.22: ಬಿಜೆಪಿಯಲ್ಲಿದ್ದ ಎಲ್ಲ ಗೊಂದಲಗಳು ಉಪಶಮನವಾಗಿವೆ. ರಾಜ್ಯ ರಾಜಕೀಯದಲ್ಲಿಈಗ ಯಾವುದೇ ತೊಂದರೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊರಬದಲ್ಲಿಪಕ್ಷದ ಸಂಘಟನೆಯಲ್ಲಿಕೆಲವೊಂದು ಭಿನ್ನಾಭಿಪ್ರಾಯಗಳಿವೆ. ಅವುಗಳ ಬಗ್ಗೆ ಸಭೆಯಲ್ಲಿಚರ್ಚಿಸಲಾಗಿದೆ. ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಮೆಚ್ಯೂರಿಟಿಯ ಕೊರತೆ ಇದೆ: ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಕುಮಾರ್ ಬಂಗಾರಪ್ಪ, ‘ಇತ್ತೀಚೆಗೆ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬದಲಾಗಿದೆ. ಹೀಗಾಗಿ, ಸದಸ್ಯರಲ್ಲಿ ಮೆಚ್ಯುರಿಟಿಯ ಕೊರತೆ ಸಹಜವಾಗಿಯೇ ಇರುತ್ತದೆ. ಹೀಗಾಗಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗೊತ್ತುವಳಿ ಮಂಡಿಸಿರುವ ವಿಧಾನವೇ ಸರಿಯಿಲ್ಲ. ಅದಕ್ಕೆ ಅದರದ್ದೇ ಆದ ಕ್ರಮವಿದೆ’ ಎಂದರು.
ಸೊರಬ ತಾಲೂಕು ಅಧ್ಯಕ್ಷರು ಹಾಗೂ ಪುರಸಭೆಯಲ್ಲಿನ ಗೊಂದಲ ಬಗ್ಗೆ ಪಕ್ಷದ ಹಿರಿಯರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರರಿದ್ದರು.





