ಗ್ಯಾರೇಜ್ ಮಾಲಕರ ಸಂಘದಿಂದ ಕಿಟ್ ವಿತರಣೆ

ಮಂಗಳೂರು, ಆ.22: ದ.ಕ. ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ರವಿವಾರ ಕುಡುಪುವಿನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಶಾಸಕ ಡಾ. ಭರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವಾಸುದೇವ ರಾವ್ ಕುಡುಪು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಜನಾರ್ದನ ಎ. ಅತ್ತಾವರ, ದಿನೇಶ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ದ. ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಕೋಶಧಿಕಾರಿ ರಾಜಗೋಪಾಲ್ ಉಪಸ್ಥಿತರಿದ್ದರು. ಮಂಗಳೂರು ಉತ್ತರ ವಲಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಅಜಯ್ ಕುಡುಪು, ಸುಜನ್ ದಾಸ್ ಕುಡುಪು, ಗಿರೀಶ್ ಕುಮಾರ್ ಪಂಪ್‌ವೆಲ್, ಸಂಘದ ನಿರ್ದೇಶಕರಾದ ಪುಂಡಲೀಕ ಸುವರ್ಣ, ರುಕ್ಮಯ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಾ. ಆಶಿತ್ ಪಿ. ಪ್ರಾರ್ಥಿಸಿದರು. ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕಮಿಲ ಸ್ವಾಗತಿಸಿದರು. ಮಾಧವ ಬಂಗೇರ ವಂದಿಸಿದರು. ಪ್ರವೀಣ್ ಮೂಡುಶೆಡ್ಡೆ ಕಾರ್ಯಕ್ರಮ ನಿರೂಪಿಸಿದರು.





