ಉಡುಪಿಯಲ್ಲಿ ರಾಯಣ್ಣ ಜಯಂತ್ಯೋತ್ಸವದ ಮೆರವಣಿಗೆ

ಉಡುಪಿ, ಆ. 22: ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225ನೇ ಜಯಂತ್ಯೋತ್ಸವದ ಮೆರವಣಿಗೆ ರವಿವಾರ ಉಡುಪಿಯಲ್ಲಿ ನಡೆಯಿತು.
ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಮೆರವಣಿಗೆಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಜಿಲ್ಲಾ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್ ಚಾಲನೆ ನೀಡಿದರು. ಬಳಿಕ ರಾಯಣ್ಣನ ಭಾವಚಿತ್ರ ಮೆರವಣಿಗೆ ಕುಂಭ ಕಲಶ, ಚಂಡೆ ವಾದನದೊಂದಿಗೆ ಆದಿ ಉಡುಪಿಯಲ್ಲಿರುವ ಬಳಗದ ಜಿಲ್ಲಾ ಕೇಂದ್ರ ಕಚೇರಿವರೆಗೆ ಸಾಗಿತು.
ಈ ಸಂದರ್ಭದಲ್ಲಿ ಬಳಗದ ಜಿಲ್ಲಾಧ್ಯಕ್ಷ ಚಿಕ್ಕಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರರಾದ ಜನಾರ್ದನ್ ಕೊಡವೂರು, ರಾಘವೇಂದ್ರ ನಾಯಕ್, ಪೂರ್ಣಿಮಾ ಜನಾರ್ದನ್, ಸವಿತಾ ನೋಟಗಾರ್, ಮಂಜುನಾಥ ವೈ ನೋಟಗಾರ, ಲಕ್ಷ್ಮಣ್ ಕೋಲ್ಕಾರ್, ಮಹೇಶ್ ಗುಂಡಿಬೈಲು ಕುಮಾರ್ ಪ್ರಸಾದ್, ವಿಠ್ಠಲ್, ರಮೇಶ್, ಶರಣಪ್ಪ, ಗಣೇಶ್ ಪಾತ್ರೋಟಿ, ಹನುಮಂತ ರಾಯ ಪೂಜಾರಿ, ಸಿದ್ದು ಪೂಜಾರಿ ಉಪಸ್ಥಿತರಿದ್ದರು.
Next Story





