ಆಮ್ಲಜನಕದ ಮಟ್ಟ ಕುಸಿತ: ಆಸ್ಪತ್ರೆಗೆ ದಾಖಲಾದ ಹರ್ಯಾಣ ಸಚಿವ ಅನಿಲ್ ವಿಜ್

ಚಂಡೀಗಡ: ಹರ್ಯಾಣದ ಗೃಹ ಹಾಗೂ ಆರೋಗ್ಯ ಸಚಿವ ಅನಿಲ್ ವಿಜ್ ಅವರನ್ನು ಆಮ್ಲಜನಕ ಮಟ್ಟ ಕುಸಿದ ಕಾರಣ ಚಂಡೀಗಡದ ಪಿಜಿಐಎಂಇ ಆರ್ ಗೆ ದಾಖಲಿಸಲಾಯಿತು.
68 ವರ್ಷದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಈ ಹಿಂದೆ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಆರೋಗ್ಯದ ಕಾರಣದಿಂದ ಹಾಜರಾಗಲು ಸಾಧ್ಯವಾಗಲಿಲ್ಲ.
ಅವರನ್ನು ರವಿವಾರ ಸಂಜೆ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗೆ (ಪಿಜಿಐಎಂಇಆರ್) ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವಿಜ್ ಶ್ವಾಸಕೋಶ ಮತ್ತು ಉಸಿರಾಟದ ಔಷಧ ತಜ್ಞರ ನೇತೃತ್ವದಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಕಿರಿಯ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಜ್ ಕಳೆದ ವಾರ ರೋಹ್ಟಕ್‌ಗೆ ಹೋಗಿದ್ದರು. ಅವರು ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿಯೊಂದಿಗೆ ಮರಳಿದ್ದರು ಹಾಗೂ ಅಲ್ಲಿಗೆ ಹೋಗಿದ ಬಂದ ಬಳಿಕ ಅವರ ಆಮ್ಲಜನಕದ ಮಟ್ಟವು ಕುಸಿಯಿತು ಎಂದು ಮೂಲಗಳು ತಿಳಿಸಿವೆ.
Next Story





