ಶ್ರೀಲಂಕಾ ನೌಕಾಪಡೆಯಿಂದ ಕಲ್ಲುತೂರಾಟ: ಭಾರತದ ಮೀನುಗಾರಿಕೆ ದೋಣಿಗಳಿಗೆ ಹಾನಿ
ರಾಮೇಶ್ವರಂ, ಆ.22: ಶನಿವಾರ ರಾತ್ರಿ ಕಛತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಇಲ್ಲಿಯ ಸುಮಾರು 60 ದೋಣಿಗಳು ಶ್ರೀಲಂಕಾ ನೌಕಾಪಡೆ ಸಿಬ್ಬಂದಿಗಳ ಕಲ್ಲುತೂರಾಟದಿಂದ ಹಾನಿಗೀಡಾಗಿವೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ರವಿವಾರ ತಿಳಿಸಿದರು. ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು 25 ದೋಣಿಗಳ ಮೀನುಗಾರಿಕೆ ಬಲೆಗಳಿಗೂ ಹಾನಿಯನ್ನುಂಟು ಮಾಡಿದ್ದಾರೆ.
ಐದು ದೋಣಿಗಳಲ್ಲಿ ಬಂದಿದ್ದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಕಲ್ಲುತೂರಾಟ ನಡೆಸಿದ್ದು,ಮೀನುಗಾರರು ಗಾಯಗೊಳ್ಳದೆ ಪಾರಾಗಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಧಿಕಾರಿಗಳು,ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಮೀನುಗಾರರ ಜೀವನೋಪಾಯವನ್ನು ಖಚಿತಪಡಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
Next Story





