ಛಾಯಾಗ್ರಾಹಕ ಆಸ್ಟ್ರೋ ಮೋಹನ್ಗೆ ಸ್ವಾನ್ ಗೌರವ
![ಛಾಯಾಗ್ರಾಹಕ ಆಸ್ಟ್ರೋ ಮೋಹನ್ಗೆ ಸ್ವಾನ್ ಗೌರವ ಛಾಯಾಗ್ರಾಹಕ ಆಸ್ಟ್ರೋ ಮೋಹನ್ಗೆ ಸ್ವಾನ್ ಗೌರವ](/images/placeholder.jpg)
ಆಸ್ಟ್ರೋ ಮೋಹನ್
ಉಡುಪಿ, ಆ.23: ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನೀಡುವ ಸ್ವಾನ್ ಗೌರವ ಪ್ರಶಸ್ತಿಗೆ ಉಡುಪಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಆಯ್ಕೆ ಯಾಗಿದ್ದಾರೆ.
ಪತ್ರಿಕಾ ಛಾಯಾಗ್ರಹಣದಲ್ಲಿ ಅವರ ಅನನ್ಯ ಅನುಭವ ಮತ್ತು ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿದೆ. ಈ ಬಾರಿ ವಿಶ್ವದ ಮೂವತ್ತು ಛಾಯಾಚಿತ್ರ ಕಲಾವಿದರಿಗೆ ಮಾತ್ರ ಈ ಗೌರವಪಾತ್ರವಾಗಿದೆ ಎಂದು ಆಂಧ್ರಪ್ರದೇಶ ಫೊಟೋಗ್ರಾಫಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ರೆಡ್ಡಿ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story