Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಜಕಾರಣಿಗಳಿಗೆ ಅನ್ವಯವಾಗದ ಕೋವಿಡ್...

ರಾಜಕಾರಣಿಗಳಿಗೆ ಅನ್ವಯವಾಗದ ಕೋವಿಡ್ ಮಾರ್ಗಸೂಚಿ

ವಾರ್ತಾಭಾರತಿವಾರ್ತಾಭಾರತಿ24 Aug 2021 12:05 AM IST
share
ರಾಜಕಾರಣಿಗಳಿಗೆ ಅನ್ವಯವಾಗದ ಕೋವಿಡ್ ಮಾರ್ಗಸೂಚಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೋವಿಡ್ ಎರಡನೇ ಅಲೆಯ ಹೊಡೆತದಿಂದ ತತ್ತರಿಸಿದ ಭಾರತ ಇದೀಗ ನಿಟ್ಟುಸಿರು ಬಿಡುತ್ತಿದೆ. ಆದರೂ ಮೂರನೇ ಅಲೆಯ ಆತಂಕ ಇಲ್ಲದಿಲ್ಲ. ಈ ಕುರಿತು ವೈದ್ಯಕೀಯ ಪರಿಣಿತರು ಎಚ್ಚರಿಸುತ್ತಲೇ ಇದ್ದಾರೆ. ಅಂತಲೇ ರಾಜ್ಯ ಸರಕಾರ ಜನ ಜಂಗುಳಿ ಸೇರುವುದನ್ನು ತಡೆಯಲು ಹಲವಾರು ಮಾರ್ಗಸೂಚಿಗಳನ್ನು ರೂಪಿಸಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮ, ಜಾತ್ರೆಗಳಿಗೆ ಇಂತಿಷ್ಟೇ ಜನರು ಸೇರಬೇಕೆಂದು ನಿಯಮಾವಳಿ ರೂಪಿಸಿದೆ. ಆದರೆ ಸರಕಾರದ ಈ ನಿಯಮಾವಳಿಯು ಆಡಳಿತ ಪಕ್ಷದ ರಾಜಕಾರಣಿಗಳಿಂದಲೇ ಉಲ್ಲಂಘಿಸಲ್ಪಡುತ್ತಿರುವುದು ವಿಷಾದದ ಸಂಗತಿಯಾಗಿದೆ.

ಕೇಂದ್ರ ಸಚಿವ ಸಂಪುಟವನ್ನು ಹೊಸದಾಗಿ ಸೇರಿದ ಮಂತ್ರಿಗಳಿಗೆ ಜನರಿಂದ ಆಶೀರ್ವಾದ ಪಡೆಯುವ ಹೆಬ್ಬಯಕೆ ಉಂಟಾಗಿದೆ. ಅದಕ್ಕಾಗಿ ಅವರು ಎಲ್ಲ ಕಡೆ ‘ಜನಾಶೀರ್ವಾದ ಯಾತ್ರೆ’ಯನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಇವರು ಮಾಡುತ್ತಿರುವ ಯಾತ್ರೆ, ಜಾತ್ರೆಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇತ್ತೀಚೆಗೆ ಕಲಬುರಗಿ ಮತ್ತು ರಾಯಚೂರುಗಳಲ್ಲಿ ಕೇಂದ್ರದ ನೂತನ ಸಚಿವರಾದ ಭಗವಂತ ಖೂಬಾ ಅವರ ‘ಜನಾಶೀರ್ವಾದ ಯಾತ್ರೆ’ ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ರಾತ್ರಿ ಹೇರಲ್ಪಟ್ಟ ಕರ್ಫ್ಯೂವನ್ನು ಉಲ್ಲಂಘಿಸಿ ಕೇಂದ್ರ ಸಚಿವರು ಭಾರೀ ಜನಸ್ತೋಮದ ಸಭೆ, ಮೆರವಣಿಗೆಗಳಲ್ಲಿ ಭಾಗವಹಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಯರಗೋಳದಲ್ಲಿ ಬಂದೂಕಿನಿಂದ ಸಿಡಿಮದ್ದು ಹಾರಿಸಿ ಮಂತ್ರಿಗಳನ್ನು ಸ್ವಾಗತಿಸಿದ ಅವಿವೇಕದ ಅತಿರೇಕವೂ ನಡೆದಿದೆ. ನಾಡ ಬಂದೂಕಿನಿಂದ ಸಿಡಿಮದ್ದು ಹಾರಿಸಿರುವುದನ್ನು ಸಚಿವ ಖೂಬಾ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಗೃಹ ಸಚಿವರು ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗಿದ್ದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳುಜನರನ್ನು ಬಂಧಿಸಿದ್ದೇಕೆ ಎಂಬುದಕ್ಕೆ ಸಚಿವರ ಉತ್ತರ ಬೇಕು. ಈ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಿದರೂ ಬಂದೂಕು ಕೈಯಲ್ಲಿ ಹಿಡಿದಿದ್ದ ಮಾಜಿ ಸಚಿವ, ಹಾಲಿ ಬಿಜೆಪಿ ನಾಯಕ ಬಾಬುರಾವ ಚಿಂಚನಸೂರ ಮೇಲೆ ಯಾಕೆ ಎಫ್‌ಐಆರ್ ದಾಖಲಿಸಿಲ್ಲ? ಕರ್ಫ್ಯೂ ಉಲ್ಲಂಘಿಸಿ ಸಮಾವೇಶ ಮಾಡಿದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ರಿಯಾಯಿತಿ ನೀಡಿದ್ದೇಕೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಜನಸಾಮಾನ್ಯರಿಗೊಂದು, ಮಂತ್ರಿ, ಶಾಸಕರಿಗೆ ಇನ್ನೊಂದು ಕಾನೂನು ಇರುತ್ತದೆಯೇ?

ಯಾದಗಿರಿ ಜಿಲ್ಲೆಯ ಯರಗೋಳದಲ್ಲಿ ಅನುಮತಿ ಪಡೆಯದೆ ಜನಾಶೀರ್ವಾದ ಯಾತ್ರೆ ನಡೆಸಿ ಸಾವಿರಾರು ಜನರನ್ನು ಸೇರಿಸಿದ್ದು ಮೊದಲನೇ ಅಪರಾಧವಾಗಿದೆ. ಸಚಿವರನ್ನು ಸ್ವಾಗತಿಸಲು ನಾಡ ಬಂದೂಕಿನಿಂದ ಸಿಡಿಮದ್ದು ಹಾರಿಸಿರುವುದು ಎರಡನೇ ಅಪರಾಧವಾಗಿದೆ. ಈ ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಲ್ಲದೆ, ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನೂ ಅಮಾನತು ಮಾಡಲಾಗಿದೆ. ಆದರೆ ಕಾರ್ಯಕ್ರಮ ಸಂಘಟಕರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ಫ್ಯೂ ಉಲ್ಲಂಘಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ಹಾರ, ತುರಾಯಿ ಹಾಕಿಸಿಕೊಂಡ ಸಚಿವ ಖೂಬಾ ಅವರಿಗೆ ರಿಯಾಯಿತಿ ನೀಡಿರುವುದು ಯಾವ ಕಾನೂನಿನ ಅಡಿಯಲ್ಲಿ ಎಂಬುದನ್ನು ಗೃಹ ಸಚಿವರು ಸ್ಪಷ್ಟವಾಗಿ ಉತ್ತರ ನೀಡಬೇಕು.

ಇಂತಹ ತಪ್ಪು ಆಡಳಿತ ಪಕ್ಷದಿಂದ ಮಾತ್ರವಲ್ಲ ಪ್ರತಿಪಕ್ಷಗಳಿಂದಲೂ ನಡೆದಿದೆ. ಕಾಂಗ್ರೆಸ್ ನವರೂ ರಾಯಚೂರು ಮತ್ತು ಕನಕಪುರಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಭಾರೀ ಸಮಾವೇಶಗಳನ್ನು ನಡೆಸಿದ್ದಾರೆ. ಬೆಳಗಾವಿ ಜೈಲಿನಿಂದ ಬಿಡುಗಡೆಯಾಗಿ ಬಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸ್ವಾಗತಿಸಲು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಭಾರೀ ಜನಸ್ತೋಮ ಸೇರಿತ್ತು. ಕಾನೂನಿಗೆ ಯಾರೂ ಅತೀತರಲ್ಲ. ಯಾರೇ ಕಾನೂನು ಉಲ್ಲಂಘಿಸಲಿ ಅವರ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು.

ಇನ್ನು ಮುಂದಿನ ದಿನಗಳಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಮಾರುಕಟ್ಟೆ ಗಳಲ್ಲಿ ಸಹಜವಾಗಿ ಜನಜಾತ್ರೆ ಸೇರುತ್ತದೆ. ಅಂತಲೇ ಸರಕಾರ ಕಟ್ಟುನಿಟ್ಟಿನ ಕೋವಿಡ್ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಆದರೆ ಹಬ್ಬ, ಜಾತ್ರೆಗಳಲ್ಲಿ ಜನ ಸೇರಬಾರದೆಂದು ಜಾರಿಗೆ ತರಲಾಗುವ ನಿಯಮಾವಳಿ ರಾಜಕಾರಣಿಗಳ ಕಾರ್ಯಕ್ರಮಗಳಿಗೆ ಯಾಕೆ ಅನ್ವಯಿಸುವುದಿಲ್ಲ? ರಾಜಕೀಯ ಕಾರ್ಯಕ್ರಮಗಳಲ್ಲಿ ಕೋವಿಡ್ ವೈರಾಣು ಬರುವುದಿಲ್ಲ ಎಂದು ಸರಕಾರಕ್ಕೆ ಯಾರಾದರೂ ಹೇಳಿದ್ದಾರಾ? ಹಿಂದೆ ಕೋವಿಡ್ ಎರಡನೇ ಅಲೆ ಬರುವ ಮುಂಚೆ ರಾಜಕೀಯ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಆಳುವ ಪಕ್ಷ ಇದೇ ರೀತಿ ದೊಡ್ಡ ಪ್ರಮಾಣದ ಸಭೆ, ಸಮಾವೇಶಗಳನ್ನು ನಡೆಸಿತು. ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ನಡೆಯಿತು. ಕುಂಭಮೇಳಕ್ಕೂ ಅನುಮತಿ ನೀಡಲಾಯಿತು. ಇದೆಲ್ಲದರ ಪರಿಣಾಮವಾಗಿ ಎರಡನೇ ಅಲೆ ಅತ್ಯಂತ ಭಯಾನಕವಾಗಿ ಅಪ್ಪಳಿಸಿ ಭಾರೀ ಸಂಖ್ಯೆಯ ಸಾವು, ನೋವುಗಳಿಗೂ ಕಾರಣವಾಯಿತೆಂಬುದನ್ನು ಮರೆಯಬಾರದು.

ಕಲಬುರಗಿ, ಬೀದರ್ ಮತ್ತು ಯಾದಗಿರಿಗಳು ರಾಜ್ಯದ ಗಡಿ ಜಿಲ್ಲೆಗಳು. ಇಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ. ಕೊಂಚ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಬಹುದು. ಇಂತಹ ಕಡೆಗಳಲ್ಲಿ ಜನರ ಆಶೀರ್ವಾದ ಪಡೆಯುವ ನೆನಪು ಒಮ್ಮಿಂದೊಮ್ಮೆಲೇ ರಾಜಕಾರಣಿಗಳಿಗೆ ಏಕೆ ಉಂಟಾಯಿತೋ ಗೊತ್ತಿಲ್ಲ. ಕೋವಿಡ್ ಮೂರನೇ ಅಲೆ ಯಾವಾಗ ಬೇಕಾದರೂ ಬರಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಿದ್ದರೂ ಅದನ್ನು ಕಡೆಗಣಿಸಿ ಅಗ್ಗದ ಪ್ರಚಾರಕ್ಕೆ ಇಂತಹ ಯಾತ್ರೆಗಳನ್ನು ಮಾಡುವುದು ಅಕ್ಷಮ್ಯ ಅಪರಾಧವಾಗಿದೆ.

ಕೋವಿಡ್ ಎರಡನೇ ಅಲೆಯಿಂದ ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಪಾಠ ಕಲಿತಂತಿಲ್ಲ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇಂತಹ ಕಡೆ ಯಾವುದೇ ರಾಜಕೀಯ ಪಕ್ಷದ ಸಭೆ, ಸಮಾರಂಭಗಳಿಗೆ ಸರಕಾರ ಅವಕಾಶ ನೀಡಬಾರದು.ಮಂತ್ರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಸನ್ಮಾನ ಮಾಡಲು ಜನತೆ ಆಹ್ವಾನಿಸಿದರೂ ಅಂತಹ ಆಹ್ವಾನಗಳನ್ನು ಒಪ್ಪಿಕೊಳ್ಳಬಾರದು. ಸನ್ಮಾನ ಸಮಾರಂಭಗಳ ಬದಲಾಗಿ ರಾಜಕಾರಣಿಗಳಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಮೊದಲು ಅವುಗಳಿಗೆ ಆದ್ಯತೆ ನೀಡಲಿ.

ವಾಸ್ತವವಾಗಿ ಕೋವಿಡ್ ಮಾರ್ಗಸೂಚಿಯ ಅನ್ವಯ ರಾಜಕೀಯ ಸಭೆ, ಸಮಾವೇಶ ಗಳನ್ನು ನಡೆಸಲು ಅವಕಾಶವಿಲ್ಲ. ಆದರೆ ರಾಜಕಾರಣಿಗಳು ಸಮಾವೇಶ ಎಂಬ ಹೆಸರನ್ನು ಉಲ್ಲೇಖಿಸದೆ ಬೇರೆ ಹೆಸರಿನಲ್ಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡುವ ಮೂಲಕ ರಂಗೋಲಿ ಕೆಳಗೆ ನುಸುಳಿ ಪಾರಾಗುವ ಚಾಲಾಕಿತನ ತೋರಿಸುತ್ತಿದ್ದಾರೆ.

ಈಗ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸುವ ಭರಾಟೆ ಆರಂಭವಾಗಿ ಕೊನೆಯ ಹಂತದಲ್ಲಿದೆ. ಈ ಚುನಾವಣೆಯಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗುವ ಅಪಾಯವಿದೆ. ಹಾಗಾಗಿ ಚುನಾವಣಾ ಆಯೋಗ ಹಾಗೂ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X