Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ...

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಕ್ಯೂಎಸ್‌ಐ ಡೈಮಂಡ್ ಗೇಜ್ ಶ್ರೇಯಾಂಕ

ವಾರ್ತಾಭಾರತಿವಾರ್ತಾಭಾರತಿ24 Aug 2021 11:38 AM IST
share
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಕ್ಯೂಎಸ್‌ಐ ಡೈಮಂಡ್ ಗೇಜ್ ಶ್ರೇಯಾಂಕ

ಮಂಗಳೂರು, ಆ. 24: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಕ್ಯೂಎಸ್ ಐ ಡೈಮಂಡ್ ಗೇಜ್ ಶ್ರೇಯಾಂಕದ ಗೌರವ ಲಭಿಸಿದ್ದು, ಇದು ಕಾಲೇಜಿನ ಗೌರವಕ್ಕೆ ಕೀರ್ತಿಯ ಕಿರೀಟವನ್ನು ನೀಡಿದಂತಾಗಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ರೆ.ಫಾ.ರಿಚರ್ಡ್‌ ಅಲೋಶಿಯಸ್ ಕುವೆಲ್ಲೋ ತಿಳಿಸಿದ್ದಾರೆ.

ಫಾದರ್ ಮುಲ್ಲರ್ ಆಸ್ಪತ್ರೆಯ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟನ್ನಿನ ಪ್ರತಿಷ್ಠಿತ ಸಂಸ್ಥೆ ಮತ್ತು ಭಾರತದ ಎರಾ ಇಂಡಿಯಾ ಎಂಬ ಸಂಸ್ಥೆಗಳ ಜಂಟಿಯಾಗಿ ಕಾಲೇಜು ಮತ್ತು ವಿವಿಗಳ ನಿರ್ವಹಣೆಯನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡುತ್ತವೆ. ಕ್ಯೂ ಎಸ್ ಐ- ಗೇಜ್ ಶ್ರೇಯಾಂಕವನ್ನು ನೀಡುವ ಒಂದು ಸ್ವತಂತ್ರ, ವಿಶ್ವಾಸಾರ್ಹ ವ್ಯವಸ್ಥೆ ಇದಾಗಿದೆ ಎಂದು ಹೇಳಿದ್ದಾರೆ.

ಕ್ಯೂ ಎಸ್ ಐ ಗೇಜ್ ಶ್ರೇಯಾಂಕದಲ್ಲಿ ವಜ್ರದ ಗುರುತು ಅಂದರೆ, ವಜ್ರ ವಿಭಾಗದಲ್ಲಿ ಗುರುತಿಸುವಿಕೆ. ಈ ಬಾರಿ ನಮಗೆ ವಜ್ರದ ಮಾನ್ಯತೆ ದೊರಕಿದ್ದು, ಮುಂದೆ ಪ್ಲಾಟಿನಂ ಮಾನ್ಯತೆಗಾಗಿ ನಾವು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದವರು ಹೇಳಿದರು.

1999ರಲ್ಲಿ ಆರಂಭವಾದ ಸಂಸ್ಥೆ ಒಂದೊಂದೇ ಮೆಟ್ಟಿಲು ಹತ್ತಿ ಬಂದು, ತನ್ನ ಪ್ರಯಾಣ ಮುಂದುವರಿಸಿದೆ. ಗುಣಮಟ್ಟದ ಶಿಕ್ಷಣ ಮತ್ತು ಶ್ರೇಷ್ಠತೆ ಎಂಬುದು ಆಕಸ್ಮಿಕವಲ್ಲ, ಇದು ಹಲವು ವರ್ಷಗಳ ತಪಸ್ಸಿನ ಫಲ. ಸಾರ್ವಜನಿಕರು, ಸರಕಾರ, ಪೋಷಕರು, ವಿದ್ಯಾರ್ಥಿಗಳು ಎಲ್ಲರಿಂದಲೂ ಗುರುತಿಸಲ್ಪಟ್ಟು ಪ್ರಶಂಸೆ ಪಡೆದಿರುವ ಸಂಸ್ಥೆಗೆ ಈ ಶ್ರೇಯಾಂಕ ಇನ್ನಷ್ಟು ಹುರುಪಿನಿಂದ ಮುಂದುವರಿಯಲು ಪ್ರೇರಣೆ ನೀಡಿದೆ. ಸಂಸ್ಥೆಯ ಆಡಳಿತ ಮಂಡಳಿಯ ದೂರದೃಷ್ಟಿ ಮತ್ತು ದಕ್ಷತೆ, ಹಾಗೂ ಸಿಬ್ಬಂದಿಯ ನಿರ್ಣಯ ಮತ್ತು ಬದ್ಧತೆಗಳಿಂದ ಇವೆಲ್ಲಾ ಸಾಧ್ಯವಾಗಿವೆ ಎಂದು ಅವರು ಹೇಳಿದರು.

ಜಾಗತಿಕ ಪರಿಣತಿ, ಅನುಭವ ಮತ್ತು ಖ್ಯಾತಿ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಸಮಗ್ರ ಜ್ಞಾನ ಇವುಗಳ ಸಮ್ಮಿಲನವಾಗಿರುವ, ಎರಾ ಇಂಡಿಯಾ ಸಂಸ್ಥೆಯ ಕ್ಯೂ ಎಸ್ ಐ- ಗೇಜ್ ಶ್ರೇಯಾಂಕ ವ್ಯವಸ್ಥೆಯು ಒಂದು ಶಿಕ್ಷಣ ಸಂಸ್ಥೆಯ ಬಗ್ಗೆ ಸಮಗ್ರ ಮತ್ತು ನಿಖರ ಚಿತ್ರಣ ನೀಡಬಲ್ಲದು. ಕ್ಯೂ ಎಸ್ ಐ- ಗೇಜ್ ಎಂಬುದು ಒಂದು ಶಿಕ್ಷಣ ಸಂಸ್ಥೆಯ ಪ್ರತಿಷ್ಠೆ ಹಾಗೂ ಉತ್ಕೃಷ್ಟತೆಗೆ ಅಧಿಕೃತ ಮುದ್ರೆ ಎಂದರೆ ತಪ್ಪಾಗಲಾರದು ಎಂದು ಎಂದು ಕಾಲೇಜಿನ ಡೀನ್ ಡಾ.ಜಯಪ್ರಕಾಶ್ ಆಳ್ವ ಶ್ರೇಯಾಂಕದ ಬಗ್ಗೆ ವಿವರ ನೀಡಿದರು.

ಕ್ಯೂ ಎಸ್‌ಐ ಗೇಜ್ ಶ್ರೇಯಾಂಕವನ್ನು ಕಂಚು, ಬೆಳ್ಳಿ, ಚಿನ್ನ, ವಜ್ರ ಅಥವಾ ಪ್ಲಾಟಿನಂ ವರ್ಗಗಳಲ್ಲಿ ನೀಡಲಾಗುತ್ತದೆ. ಹೀಗೆ ಶ್ರೇಯಾಂಕ ನೀಡಬೇಕಾದರೆ ಶಿಕ್ಷಣ ಸಂಸ್ಥೆಯಲ್ಲಿರುವ ಸೌಲಭ್ಯಗಳು, ಆಡಳಿತ ವ್ಯವಸ್ಥೆ, ಬೋಧಕ ವರ್ಗದ ಗುಣಮಟ್ಟ ಪರಿಣತಿ ಮತ್ತು ಅನುಭವ, ಬೋಧನೆ ಮತ್ತು ಕಲಿಯುವಿಕೆ, ವಿದ್ಯಾರ್ಥಿಗಳ ವಿವಿಧತೆ, ಸಂಶೋಧನಾ ಕಾರ್ಯ, ಸಂಸ್ಥೆಯ ಸಾಮಾಜಿಕ ಜವಾಬ್ದಾರಿ, ಉದ್ಯೋಗಾರ್ಹತೆ, ಕಲೆ ಮತ್ತು ಸಂಸ್ಕೃತಿ, ನಾವೀನ್ಯತೆ, ಅಂತಾರಾಷ್ಟ್ರೀಯತೆ ಸಂಪರ್ಕಶೀಲತೆ, ಶೈಕ್ಷಣಿಕ ಬೆಳವಣಿಗೆ ಈ ಹದಿಮೂರು ಅಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ವಿಶ್ಲೇಷಣೆ ಮಾಡುವಾಗ ಕೇವಲ ಶಿಕ್ಷಣ ಸಂಸ್ಥೆ ನೀಡಿದ ಮಾಹಿತಿಯಲ್ಲದೇ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸಂಸ್ಥೆಯ ಬೋಧಕ ವರ್ಗದ ಅಭಿಪ್ರಾಯಗಳನ್ನು ಸಂಗ್ರಹಿಸಿ, ವಿವಿಧ ಮೂಲಗಳಿಂದ ಮಾಹಿತಿಗಳನ್ನು ಕಲೆಹಾಕಿ, ಖಚಿತಪಡಿಸಿಕೊಂಡೇ ಶ್ರೇಯಾಂಕವನ್ನು ನೀಡಲಾಗುತ್ತದೆ. ಎಲ್ಲ ಕೋನಗಳಿಂದ ಒಂದು ಶಿಕ್ಷಣ ಸಂಸ್ಥೆಯ ಯೋಗ್ಯತೆಯನ್ನು ಅಳತೆ ಮಾಡುವ ಮಾನದಂಡ ಇದಾಗಿದೆ. ಕ್ಯೂ ಎಸ್‌ಐ- ಗೇಜ್ ಶ್ರೇಯಾಂಕವು ಪೋಷಕರಿಗೆ, ಸಂಸ್ಥೆಯಲ್ಲಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಸ್ಥೆಯ ಗುಣಮಟ್ಟದ ಬಗ್ಗೆ ವಿಶ್ವಾಸಾರ್ಹ ಖಾತರಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಸಂಸ್ಥೆಗೆ ಮುಂದೆ ಸಾಗಬೇಕಾದ ದಾರಿಯ ಬಗ್ಗೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ಡಾ. ಜಯಪ್ರಕಾಶ್ ಆಳ್ವ ಹೇಳಿದ್ದಾರೆ.

ಈ ಸಂದರ್ಭ ಕ್ಯೂಎಸ್‌ಐ ಗೇಜ್ ಪ್ರಮಾಣ ಪತ್ರವನ್ನು ಆಡಳಿತಾಧಿಕಾರಿ ರೆ.ಫಾ.ಅಜಿತ್ ಮಿನೇಜಸ್ ಹಸ್ತಾಂತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಸಂಸ್ಥೆಯ ಪ್ರಮುಖರಾದ ರೆ.ಫಾ.ರುಡಾಲ್ಫ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಡಾ.ರಮೇಶ್ ಭಟ್, ಡಾ.ಹರೀಶ್ ಗೌಡ, ಪ್ರಾಧ್ಯಾಪಕ ಡಾ.ಶಿವಶಂಕರ ಎ.ಆರ್. ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X