ಖಾತೆ ಹಂಚಿಕೆ ಅಸಮಾಧಾನ: ನನ್ನದು ಬೀದಿ ನಾಟಕವಲ್ಲ ಎಂದ ಸಚಿವ ಆನಂದ್ ಸಿಂಗ್

ಬೆಂಗಳೂರು, ಆ.24: ನನ್ನದು ಯಾವ ಬೀದಿ ನಾಟಕವೂ ಅಲ್ಲ. ನನ್ನ ಮನವಿಯನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನನ್ನ ಬೇಡಿಕೆ ಏನಿದೆಯೋ ಅದನ್ನು ಹೇಳಿದ್ದೇನೆ. ನನ್ನ ಮನವಿಯನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ ಎಂದರು.
ನನ್ನದು ಯಾವ ಬೀದಿ ನಾಟಕವೂ ಅಲ್ಲ ಎಂದು ಪ್ರತಿಕ್ರಿಯಿಸಿದ ಅವರು, ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ನನ್ನ ನಿಲುವನ್ನು ಮತ್ತೊಮ್ಮೆ ಅವರ ಗಮನಕ್ಕೆ ತಂದಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ಆನಂದ್ ಸಿಂಗ್ ನುಡಿದರು.
Next Story





