ಆಗುಂಬೆ ಘಾಟಿ: ತಡೆಗೋಡೆಗೆ ಢಿಕ್ಕಿ ಹೊಡೆದ ಕಂಟೈನರ್ ಲಾರಿ

ಹೆಬ್ರಿ, ಆ.24: ಹೆಬ್ರಿ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿಯ ಏಳನೇ ಸುತ್ತಿನಲ್ಲಿ ಕಂಟೈನರ್ ಲಾರಿಯೊಂದು ಬ್ರೇಕ್ ಫೇಲಾಗಿ ರಸ್ತೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನಿಂತ ಘಟನೆ ಸೋಮವಾರ ಅಪರಾಹ್ನದ ವೇಳೆ ನಡೆದಿದೆ.
ಮಂಗಳವಾರ ಎರಡು ಕ್ರೇನ್‌ಗಳ ಮೂಲಕ ಅದನ್ನು ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸರಕುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್‌ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಘಾಟಿಯ ಏಳನೇ ತಿರುವಿನಲ್ಲಿ ರಸ್ತೆಯ ತಡೆಗೋಡೆಗೆ ಗುದ್ದಿದೆ. ಲಾರಿಯಲ್ಲಿ ಚಾಲಕ ಒಬ್ಬನೇ ಇದ್ದನೆಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಇದೇ ತಿರುವಿನ ಪಕ್ಕದಲ್ಲಿ ಲಾರಿಯೊಂದು ರಸ್ತೆ ತಡೆಗೋಡೆಗೆ ಗುದ್ದಿದ ಘಟನೆ ನಡೆದಿತ್ತು. ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ತರಿಸಿ ಅವುಗಳ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು.
Next Story





