ಬೆಂಗಳೂರು: ವೃದ್ಧ ದಂಪತಿ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು, ಆ.24: ವೃದ್ಧ ದಂಪತಿಯನ್ನು ಕೊಲೆಗೈದ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ನಾರಾಯಣಪ್ಪ, ತಿರುಮಲ, ರಾಮು ಹಾಗೂ ಶೇಕ್ ಆಸೀಫ್ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಕಳೆದ 12 ವರ್ಷಗಳಿಂದ ವೃದ್ಧ ದಂಪತಿ ಮನೆಯಲ್ಲಿ ವಾಸವಿದ್ದ ಹಿಂದೂಪುರ ಮೂಲದ ನಾರಾಯಣಪ್ಪ ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿದ್ದ. ವೃದ್ಧ ದಂಪತಿಯ ಚಿನ್ನಾಭರಣ ಮತ್ತು ಹಣಕಾಸುವ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ ನಾರಾಯಣಪ್ಪ ಹಣದ ಆಸೆಗೆ ಕೊಲೆಗೈದಿರುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಂಧಿತ ಆರೋಪಿಗಳಿಂದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಇಲ್ಲಿನ ಕಾಶಿನಗರದಲ್ಲಿ ವಾಸಿಸುತ್ತಿದ್ದ ಶಾಂತರಾಜು(70), ಪ್ರೇಮಲತಾ(65) ದಂಪತಿಯನ್ನು ಆ.20ರಂದು ದುಷ್ಕರ್ಮಿಗಳು ಕೊಲೆಗೈದಿದ್ದರು. ಈ ಸಂಬಂಧ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
Next Story





