"ಗೂಂಡಾಗಳು ಹಿಂದೂ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದಾರೆ": ಇಂಧೋರ್ ಗುಂಪು ಥಳಿತದ ಕುರಿತು ಕಾಂಗ್ರೆಸ್

ಹೊಸದಿಲ್ಲಿ, ಅ. 23: ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಮ ಸಂಘರ್ಷ ಹಾಗೂ ಧ್ರುವೀಕರಣ ಪ್ರೇರೇಪಿಸುವುದಕ್ಕೆ ಮುನ್ನುಡಿಯಾಗಿ ಇಂದೋರ್ ನಲ್ಲಿ ಬಳೆ ಮಾರಾಟಗಾರನ ಮೇಲೆ ಹಲ್ಲೆ ನಡೆದಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಮಧ್ಯಪ್ರದೇಶದಲ್ಲಿ ಕಾನೂನಿನ ಯಾವುದಾದರೂ ನಿಯಮಗಳು ಅಸ್ತಿತ್ವದಲ್ಲಿ ಇವೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್, ಇಂದೋರ್ ನಲ್ಲಿ ಬಳೆಗಾರನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳು ಹಿಂದೂ ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ ಎಂದಿದೆ.
‘‘ಮೊದಲು ಗಾಝಿಯಾಬಾದ್ ನಲ್ಲಿ ಅನಂತರ ಕಾನ್ಪುರದಲ್ಲಿ ಹಾಗೂ ಈಗ ಇಂದೋರ್ನಲ್ಲಿ ಘಟನೆ ನಡೆದಿದೆ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧರಿಸಲು ಈ ವ್ಯಕ್ತಿಗಳು ಯಾರು?’’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
‘‘ಗುಂಪು ಹಿಂಸಾಚಾರ ಹಾಗೂ ಕಾನೂನು ಭಂಜಕರ ಕೃತ್ಯವನ್ನು ರಾಜ್ಯ ಗೃಹ ಸಚಿವರು ಸಮರ್ಥಿಸಿಕೊಳ್ಳಾತ್ತಾರೆ ಎಂದಾದರೆ, ಅವರು ಗೃಹ ಮಂತ್ರಿಯ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಹರಲ್ಲ’’ ಎಂದು ಚಿದಂಬರಂ ಹೇಳಿದರು.
‘‘ಹಿಂಸಾಚಾರ ಹರಡುವ ಮೂಲಕ ಈ ಗೂಂಡಾಗಳು ಪವಿತ್ರ ಹಿಂದೂ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಇದು ಕಾನೂನಿನ ನಿಯಮವೇ?’’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.







