ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಆರಂಭಿಕ ಹಂತದಲ್ಲೇ ಮೂರು ವಿಕೆಟ್ ಕಳೆದುಕೊಂಡ ಭಾರತ

Photo: Twitter/ICC
ಲೀಡ್ಸ್: ಇಂಗ್ಲೆಂಡ್ ನ ಲೀಡ್ಸ್ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯಾಟದಲ್ಲಿ ಭಾರತ ತಂಡವು ಆರಂಭಿಕ ಆಘಾತಕ್ಕೊಳಗಾಗಿದೆ. ಜೇಮ್ಸ್ ಆಂಡರ್ಸನ್ ರ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ 40 ರನ್ ಗಳಿಗೆ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಪಂದ್ಯಾಟ ಮುಂದುವರಿಸಿದೆ.
ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಗಮಿಸಿದ ಕೆ.ಎಲ್ ರಾಹುಲ್ ರನ್ ಗಳಿಸದೇ ಪೆವಿಲಿಯನ್ ಗೆ ವಾಪಸಾದರು. ಬಳಿಕ ಚೇತೇಶ್ವರ ಪೂಜಾರ 1 ರನ್ ಹಾಗೂ ನಾಯಕ ವಿರಾಟ್ ಕೊಹ್ಲಿ 7 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಸದ್ಯ ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಮುಂದುವರಿಸುತ್ತಿದ್ದಾರೆ. ಭಾರತ ತಂಡ ಪ್ರಥಮ ಇನ್ನಿಂಗ್ಸ್ ಮುಂದುವರಿಸಿದ್ದು 20 ಓವರ್ ಗಳಲ್ಲಿ 40 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದೆ.
James Anderson is on
— ICC (@ICC) August 25, 2021
He picks up his third scalp dismissing Indian skipper Virat Kohli for 7.
are 21/3. #WTC23 | #ENGvIND | https://t.co/AZCdNvbRbc pic.twitter.com/6oW8DCSMHp