ಆರ್ಥಿಕತೆಯ ಗಂಧಗಾಳಿ ಗೊತ್ತಿಲ್ಲದಂತೆ ವರ್ತಿಸುವ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾದರೂ ಹೇಗೆ?: ಬಿಜೆಪಿ ವ್ಯಂಗ್ಯ

ಬೆಂಗಳೂರು, ಆ. 25: ಕೈಗಾರಿಕೆ ಹಾಗೂ ಉತ್ಪಾದನಾ ಕ್ಷೇತ್ರದ ವೃದ್ಧಿಗೆ ಸಹಕಾರ ನೀಡದೇ ಇದ್ದರೆ ದೇಶದ ಪ್ರಗತಿ ಹೇಗೆ ಸಾಧ್ಯ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಆರ್ಥಿಕತೆಯ ಗಂಧಗಾಳಿ ಗೊತ್ತಿಲ್ಲದಂತೆ ವರ್ತಿಸುವ ನೀವು ಅತಿ ಹೆಚ್ಚು ಅವಧಿಗೆ ಬಜೆಟ್ ಮಂಡಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತಿದೆ' ಎಂದು ಬಿಜೆಪಿ ಟೀಕಿಸಿದೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ಕೃಷಿ ಭೂಮಿ ಖರೀದಿ ಮಿತಿಗೆ ವಿನಾಯಿತಿ ನೀಡುವಾಗ ನೀವು ಯಾವ ಉದ್ಯಮಿಗಳ ಒತ್ತಡಕ್ಕೆ ಮಣಿದಿದ್ದಿರಿ? ಅದು ರಾಜ್ಯ ಮಾರಾಟ ಮಾಡುವ ಪ್ರಯತ್ನ ಎನ್ನಲು ಸಾಧ್ಯವೇ? ಎಂದು ವಾಗ್ದಾಳಿ ನಡೆಸಿದೆ.
ಕೈಗಾರಿಕೆ ಹಾಗೂ ಉತ್ಪಾದನಾ ಕ್ಷೇತ್ರದ ವೃದ್ಧಿಗೆ ಸಹಕಾರ ನೀಡದೇ ಇದ್ದರೆ ದೇಶದ ಪ್ರಗತಿ ಹೇಗೆ ಸಾಧ್ಯ @siddaramaiah?
— BJP Karnataka (@BJP4Karnataka) August 25, 2021
ಆರ್ಥಿಕತೆಯ ಗಂಧಗಾಳಿ ಗೊತ್ತಿಲ್ಲದಂತೆ ವರ್ತಿಸುವ ನೀವು ಅತಿ ಹೆಚ್ಚು ಅವಧಿಗೆ ಬಜೆಟ್ ಮಂಡಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತಿದೆ.
#NationalMonetisationPipeline
Next Story







