ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ಸಹಾಯಧನ ಯೋಜನೆ ಹಿಂಪಡೆಯಲು ಶಾಸಕ ಯತ್ನಾಳ್ ಆಗ್ರಹ

ವಿಜಯಪುರ, ಆ.25: ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ರಾಜ್ಯ ಸರಕಾರದಿಂದ ನೀಡಲಾಗುವ ಒಂದು ಲಕ್ಷ ರೂ.ಗಳ ಸಹಾಯಧನ ಯೋಜನೆಯನ್ನು ಹಿಂಪಡೆದು, ಎಲ್ಲ ಜಾತಿ, ಧರ್ಮದವರಿಗೂ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಸಂಬಂಧ ತಾನು ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದು, ಬಿಜೆಪಿ ಸರಕಾರ ಮುಸ್ಲಿಮರ ತುಷ್ಟೀಕರಣ ಮಾಡುವುದು ಸರಿಯಲ್ಲ. ಕ್ಯಾನ್ಸರ್ ರೋಗ ಯಾವುದೆ ಜಾತಿ, ಧರ್ಮ ನೋಡಿಕೊಂಡು ಬರಲ್ಲ. ಆದುದರಿಂದ, ಸರಕಾರ ಬಿಪಿಎಲ್ ಕಾರ್ಡು ಹೊಂದಿರುವ ಎಲ್ಲ ಬಡವರಿಗೂ ಈ ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.
ಈ ತಾರತಮ್ಯವನ್ನು ಸರಿಪಡಿಸದಿದ್ದರೆ ನಮ್ಮ ಪಕ್ಷದ ಸರಕಾರಕ್ಕೂ ಬೇರೆ ಪಕ್ಷಗಳ ಸರಕಾರಗಳಿಗೂ ಯಾವುದೆ ವ್ಯತ್ಯಾಸವಿರುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
Next Story





