ಹಿರಿಯ ನಾಗರಿಕ ಪುನರ್ವಸತಿ ಕೇಂದ್ರ ಬೇಬಿ ಸೇವಾಶ್ರಮ ಉದ್ಘಾಟನೆ

ಉಡುಪಿ, ಆ.25: ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಕಾಟಿಪಳ್ಳ್ ಇದರ ಅಂಗ ಸಂಸ್ಥೆ ನೂತನ ಬೇಬಿ ಸೇವಾಶ್ರಮ ಹಿರಿಯ ನಾಗರಿಕ ಪುನರ್ವಸತಿ ಕೇಂದ್ರವನ್ನು ಮಾನವ ಹಕ್ಕು ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಾ.ರವೀಂದ್ರನಾಥ ಶಾನ್ ಬೋಗ ಉದ್ಘಾಟಿಸಿದರು.
ಎ.ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ, ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್, ಸಮಾಜ ಸೇವಕ ಐರಿನ್ ಕೆಸ್ಟೋಲಿನ್, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಟ್ರಸ್ಟ್‌ನ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ, ಬೇಬಿ ಸೇವಾಶ್ರಮದ ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
Next Story





