ಇಹ್ಸಾನ್ ಎಜುಪ್ಲಾನೆಟ್ ಪದಾಧಿಕಾರಿಗಳ ಆಯ್ಕೆ

ಅಜ್ಮಲ್, ಅದ್ನಾನ್
ಕಾಪು, ಆ.25: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಅವಾ ವಿಭಾಗವಾದ ಇಹ್ಸಾನ್ ಎಜುಪ್ಲಾನೆಟ್ ವಿದ್ಯಾರ್ಥಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಜ್ಮಲ್, ಪ್ರಧಾನ ಕಾರ್ಯದರ್ಶಿಯಾಗಿ ಅದ್ನಾನ್ ಮುಡಿಪು, ಕೋಶಾಧಿಕಾರಿಯಾಗಿ ಹಿಸಾನ್ ಕಡಬಗೆರೆ ಯನ್ನು ಆರಿಸಲಾಯಿತು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸ್ವಾಬಿರ್ ಸಅದಿ ವಹಿಸಿದ್ದರು. ಪ್ರೊ.ಹಸೀಬ್ ಅಹ್ಸನಿ , ಶಫೀಕ್ ಅಹ್ಸನಿ, ಹನೀಫ್ ಸಅದಿ ಬಾತಿಷ್ ಸಕಾಫಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಮುಸ್ತಫ ಸ್ವಾಗತಿಸಿದರು. ಆದ್ನಾನ್ ವಂದಿಸಿದರು.
Next Story





