ಲಾಕೌಡೌನ್‌ನಿಂದ ವ್ಯವಹಾರದಲ್ಲಿ ನಷ್ಟ: ವರ್ತಕ ಆತ್ಮಹತ್ಯೆ
ಬ್ರಹ್ಮಾವರ, ಆ.25: ಕೊರೋನ ಲಾಕ್ ಡೌನ್‌ನಿಂದ ವ್ಯವಹಾರದಲ್ಲಿ ಆಗಿರುವ ನಷ್ಟದಿಂದ ಮನನೊಂದು ವರ್ತಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.24ರಂದು ರಾತ್ರಿ ಹೆಗ್ಗುಂಜೆ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಅರುಣ್ ಕುಮಾರ್ ಶೆಟ್ಟಿ (48) ಎಂದು ಗುರುತಿಸಲಾಗಿದೆ. ಇವರು ಬೆಳಗಾಂನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡಿ ಕೊಂಡು, ಅಲ್ಲೇ ತಿಲಕ್ವಾಡಿ ಎಂಬಲ್ಲಿ ಅಂಗಡಿ ವ್ಯವಹಾರ ನಡೆಸುತ್ತಿದ್ದರು. ಕಳೆದ ಎರಡು ವರ್ಷ ಗಳಿಂದ ಲಾಕ್ ಡೌನ್‌ನಿಂದ ವ್ಯವಹಾರ ದಲ್ಲಿ ಆಗಿರುವ ನಷ್ಟದಿಂದ ಮನನೊಂದ ಇವರು, ಆ. 24ರಂದು ರಾತ್ರಿ ಬೆಳಗಾಂ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಿಲಕ್ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲಿಂದ ಇವರು ತನ್ನ ತಾಯಿಯ ಮನೆಯಾದ ಹೆಗ್ಗುಂಜೆ ಗ್ರಾಮದ ನಡುಬೆಟ್ಟುಗೆ ಬಂದು ಮನೆಯ ಹಿಂಭಾಗದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕಿಸೆಯಲ್ಲಿ ವ್ಯವಹಾರದಲ್ಲಿ ವ್ಯಾಪಾರ ಕಡಿಮೆ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಬರೆದ ಚೀಟಿ ದೊರೆತಿದೆ. ಈ ಬಗ್ಗೆ ಬ್ರಹ್ಮಾವರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





