ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕಾಪು, ಆ.25: ಮದ್ಯ ಸೇವನೆ ಚಟ ಹಾಗೂ ಹೊಟ್ಟೆನೋವಿನಿಂದ ಖಿನ್ನತೆಗೆ ಒಳಗಾಗಿದ್ದ ಸದಾನಂದ(74) ಎಂಬವರು ಆ.24ರಂದು ಸಂಜೆ ವೇಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಕೆಲವು ತಿಂಗಳ ಹಿಂದೆ ಕಚ್ಚಿದ ಚೇಳುವಿನಿಂದ ನಡೆಯಲು ಸಾಧ್ಯವಾಗದೆ ಮನನೊಂದ ಹಾವಂಜೆ ಮುಗ್ಗೇರಿ ನಿವಾಸಿ ಗಣಪತಿ ನಾಯಕ್ ಆ.24ರಂದು ಸಂಜೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





