ಅಪ್ಘಾನ್: ಪ್ರಮುಖ ಸಚಿವ ಹುದ್ದೆಗಳಿಗೆ ಹಿರಿಯ ಮುಖಂಡರನ್ನು ನೇಮಿಸಿದ ತಾಲಿಬಾನ್
ಕಾಬೂಲ್, ಆ.25: ರಕ್ಷಣಾ ಇಲಾಖೆ ಹಾಗೂ ವಿತ್ತ ಇಲಾಖೆಗೆ ಹಿರಿಯ ಮುಖಂಡರನ್ನು ಸಚಿವರನ್ನಾಗಿ ನೇಮಿಸಲಾಗಿದೆ ಎಂದು ತಾಲಿಬಾನ್ವಕ್ತಾರರು ಬುಧವಾರ ಹೇಳಿದ್ದಾರೆ.
ಗುಲ್ ಆಘಾ ವಿತ್ತ ಸಚಿವರಾಗಿ ಹಾಗೂ ಸದ್ರ್ ಇಬ್ರಾಹೀಂ ಪ್ರಭಾರಿ ಒಳಾಡಳಿತ ಸಚಿವರಾಗಿ ನೇಮಕಗೊಂಡಿದ್ದಾರೆ. ಮುಲ್ಲಾ ಅಬ್ದುಲ್ ಖಯ್ಯಾಂ ಝಾಕಿರ್ ಪ್ರಭಾರಿ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದಾರೆ ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝಿರಾ ವರದಿ ಮಾಡಿದೆ. ಆದರೆ ತಾಲಿಬಾನ್ ಈ ವರದಿಯನ್ನು ಇನ್ನೂ ದೃಢಪಡಿಸಿಲ್ಲ.
ಜೊತೆಗೆ, ಪ್ರಾಂತೀಯ ಗವರ್ನರ್ ಹುದ್ದೆಗೆ, ಕಳೆದ 20 ವರ್ಷಗಳ ಹೋರಾಟದ ಅವಧಿಯಲ್ಲಿ ಅತೀ ಹೆಚ್ಚು ಅನುಭವಿ ಕಮಾಂಡರ್‌ಗಳನ್ನು ನೇಮಿಸಲಾಗುವುದು ಎಂದು ತಾಲಿಬಾನ್‌ನ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದರು.
ಇತರ ಸರಕಾರಿ ಹುದ್ದೆಗಳಿಗೆ ತಾಲಿಬಾನ್‌ನ ಪ್ರಮುಖ ಸೇನಾಧಿಕಾರಿಗಳ ನೇಮಕವಾಗಲಿದೆ. ಅವರು ಹೇಳಿಕೊಂಡಿರುವ ರೀತಿ ಅವರ ಆಡಳಿತ ಶೈಲಿಯಲ್ಲಿ ಬದಲಾವಣೆ ಆಗದು. ನಾಗರಿಕ ಸರಕಾರ ಸ್ಥಾಪನೆಗೆ ಅವರು ಒಲವು ಹೊಂದಿಲ್ಲ ಎಂದು ಓಸ್ಲೋ ಸಂಸ್ಥೆಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಮ್‌ಡ್ ಗ್ರೂಪ್ಸ್ ವಿಭಾಗದ ಸಹ ನಿದೆರ್ೀಶಕ ಆ್ಯಶ್ಲೆ ಜಾಕ್ಸನ್ ಹೇಳಿದ್ದಾರೆ.





