ಉಳ್ಳಾಲ: ಹಸಿ ಕಸ ಸಂಗ್ರಹ ದ ಬಕೆಟ್ ಉದ್ಘಾಟನೆ

ಉಳ್ಳಾಲ: ಇಲ್ಲಿನ ನಗರ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಹಸಿ ಕಸ ಸಂಗ್ರಹ ಮಾಡಲು ಬಕೆಟ್ ನೀಡಲು ಉಳ್ಳಾಲ ನಗರ ಸಭೆ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಈ ಬಕೆಟ್ ಉದ್ಘಾಟನಾ ಕಾರ್ಯಕ್ರಮ ವು ಬುಧವಾರ ನಗರ ಸಭೆಯಲ್ಲಿ ನಡೆಯಿತು.
ನಗರ ಸಭೆ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಬಕೆಟ್ ಉದ್ಘಾಟನೆ ಮಾಡಿ ಸರ್ಕಾರದ 22 ಲಕ್ಷ ರೂ. ಅನುದಾನ ದಲ್ಲಿ 19,000 ಮನೆಗಳಿಗೆ ಬಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಉಳ್ಳಾಲ ನಗರ ಸಭಾ ಅಧ್ಯಕ್ಷ ಚಿತ್ರ ಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಪೌರಾಯುಕ್ತ ರಾಯಪ್ಪ, ಕೌನ್ಸಿಲರ್ ಗಳಾದ ಸಪ್ನ ಹರೀಶ್, ಭಾರತಿ, ಗೀತಾ ಬಾಯಿ ಪ್ರಭು, ನಮಿತಾ ಗಟ್ಟಿ,ರೇಶ್ಮಾ ಜಗದೀಶ್, ಮಮತಾ ರಾಘವ, ಅಬ್ದುಲ್ ಜಬ್ಬಾರ್, ಇಬ್ರಾಹಿಂ ಅಶ್ರಫ್, ಅಬ್ದುಲ್ ಅಝೀಝ್, ಅಬ್ದುಲ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು
Next Story





