ಮಂಗಳೂರು: ಮನೆಗೆ ನುಗ್ಗಿ ಲ್ಯಾಪ್ ಟಾಪ್ ಕಳವು
ಮಂಗಳೂರು, ಆ.26: ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರ 2ನೇ ಮಹಡಿಯ ಮನೆಗೆ ನುಗ್ಗಿದ ಆಗಂತುಕರು ಲ್ಯಾಪ್ಟಾಪ್ ಕಳವುಗೈದ ಘಟನೆ ವರದಿಯಾಗಿದೆ.
ಆ.2ರಂದು ಬೆಳಗ್ಗೆ 9:30ರಿಂದ 10:30ರ ಅವಧಿಯಲ್ಲಿ ಅಪಾರ್ಟ್ಮೆಂಟ್ನ 2ನೇ ಮಹಡಿಯಲ್ಲಿರುವ 202ನೇ ಮನೆಯ ಬಾಗಿಲಿನ ಚಿಲಕವನ್ನು ತೆಗೆದು ಒಳ ಪ್ರವೇಶಿಸಿದ್ದಾರೆ. ಮನೆಯ ಹಾಲ್ನಲ್ಲಿ ಟೇಬಲ್ ಮೇಲೆ ಇರಿಸಿದ್ದ ಲೆನೊವೊ ಕಂಪೆನಿಯ ಲ್ಯಾಪ್ಟಾಪ್ ಕಳವು ಮಾಡಿಕೊಂಡು ಹೋಗಿದ್ದಾರೆ. ಲ್ಯಾಪ್ಟಾಪ್ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story