ಜೆಎನ್ ಯು ಕ್ಯಾಂಪಸ್ ನಲ್ಲಿ ಯುವತಿಯ ನಿಗೂಢ ಸಾವು

ಹೊಸದಿಲ್ಲಿ, ಆ.26: ಇಲ್ಲಿನ ಜವಾಹರಲಾಲ್ ನೆಹರೂ ವಿವಿ (ಜೆಎನ್ ಯು) ಕ್ಯಾಂಪಸ್ ನಲ್ಲಿ ವಾಸವಾಗಿದ್ದ 26 ವರ್ಷದ ಮಹಿಳೆಯ ಸಾವು ಸಂದೇಹಾಸ್ಪದವೆಂಬುದಾಗಿ ಪೊಲೀಸರು ಗುರುವಾರ ದೃಢಪಡಿಸಿದ್ದಾರೆ.
ಮೃತ ಯುವತಿಯನ್ನು ಬಿಹಾರದ ಬುಕ್ಸಾರ್ ನಿವಾಸಿ ಮಾಧುರಿ ಕುಮಾರಿ ಎಂದು ಗುರುತಿಸಲಾಗಿದ್ದು ಆಕೆ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿನಿಯೆಂದು ತಿಳಿದುಬಂದಿದೆ. ಜೆಎನ್ ಯು ವಿವಿಯ ಬ್ರಹ್ಮಪುತ್ರಾ ಹಾಸ್ಟೆಲ್ ನಲ್ಲಿ ಆಕೆ ವಾಸವಾಗಿದ್ದಳು. ಆಕೆ ತನ್ನ ಪತಿಯೊಂದಿಗೆ ವಾಸವಾಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ಆತ್ಮಹತ್ಯೆಯ ಪ್ರಕರಣವೆಂದು ಪೊಲೀಸರು ಶಂಕಿಸಿದ್ದಾರೆ. ಹಾಸ್ಟೆಲ್ ನ ಎರಡನೆ ಮಳಿಗೆಯಿಂದ ಜಿಗಿದು ಮಹಿಳೆ ಸಾವಿಗೆ ಶರಣಾಗಿದ್ದಾಳೆ ಎಂದವರು ಹೇಳಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಆಕೆಯ ಸಾವಿನ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾದೀತೆಂದು ಅವರು ಸ್ಪಷ್ಟಪಡಿಸಿದ್ದರು.
ಆಕೆಯ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲವೆಂದು ಪೊಲೀಸರು ತಿಳಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿರುವದಾಗಿ ಹೇಳಿದ್ದಾರೆ.
Next Story





