ಕಾಬೂಲ್ ನಲ್ಲಿ ಅಮೆರಿಕದ ಯೋಧರನ್ನು ಕೊಂದವರ ವಿರುದ್ಧ ಪ್ರತೀಕಾರ: ಬೈಡನ್ ಪ್ರತಿಜ್ಞೆ

ವಾಷಿಂಗ್ಟನ್: ಕಾಬೂಲ್‌ನಲ್ಲಿ 12 ಅಮೆರಿಕನ್ ಸೈನಿಕರನ್ನು ಆತ್ಮಾಹುತಿ ಬಾಂಬ್ ದಾಳಿ ಮೂಲಕ ಹತ್ಯೆಗೈದವರನ್ನು ನಾವು ಬೇಟೆಯಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಪ್ರತಿಜ್ಞೆ ಮಾಡಿದರು ಹಾಗೂ ಅಫ್ಘಾನಿಸ್ತಾನದಿಂದ ಸಾವಿರಾರು ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಅಮೆರಿಕವು ಪೂರ್ಣಗೊಳಿಸುತ್ತದೆ ಎಂದು ಅವರು ಹೇಳಿದರು.
"ನಾವು ಕ್ಷಮಿಸುವುದಿಲ್ಲ. ನಾವು ಮರೆಯುವುದಿಲ್ಲ. ನಾವು ನಿಮ್ಮನ್ನು ಬೇಟೆಯಾಡಿ ಪ್ರತೀಕಾರ ತೀರಿಸುತ್ತೇವೆ" ಎನ್ನುವುದು ಈ ದಾಳಿಯನ್ನು ಮಾಡಿದವರಿಗೆ ಹಾಗೂ ಅಮೆರಿಕಕ್ಕೆ ಹಾನಿ ಬಯಸಿದ ಯಾರಿಗಾದರೂ ಇದು ತಿಳಿದಿರಲಿ ಎಂದು ಬೈಡನ್ ಹೇಳಿದರು.
ಶ್ವೇತಭವನದ ಭಾವನಾತ್ಮಕ ಭಾಷಣದಲ್ಲಿ ಬೈಡನ್ ಅವರು ಹತ್ಯೆಯಾದ ಅಮೆರಿಕದ ಸೈನಿಕರನ್ನು "ಹೀರೋಗಳು" ಎಂದು ಶ್ಲಾಘಿಸಿದರು ಮತ್ತು ಕಾಬೂಲ್‌ನಿಂದ ಸ್ಥಳಾಂತರಿಸುವ ಕಾರ್ಯಾಚರಣೆಯು ಆಗಸ್ಟ್ 31 ರವರೆಗೆ ಮುಂದುವರಿಯುತ್ತದೆ ಎಂದು ಹೇಳಿದರು.
"ನಾವು ಭಯೋತ್ಪಾದಕರಿಗೆ ಭಯಪಡುವುದಿಲ್ಲ. ನಮ್ಮ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲು ನಾವು ಬಿಡುವುದಿಲ್ಲ. ನಾವು ತೆರವುಗೊಳಿಸುವಿಕೆಯನ್ನು ಮುಂದುವರಿಸುತ್ತೇವೆ ಎಂದು ಬೈಡನ್ ಹೇಳಿದ್ದಾರೆ.





