ಹಾಸನ: ತಲೆಯನ್ನು ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ

ಹಾಸನ, ಆ.27: ವ್ಯಕ್ತಿಯೋರ್ವನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಘಟನೆ ಅರಕಲಗೂಡು ತಾಲೂಕಿನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದ ಬಳಿ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತರನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಮೂಲದವರಾದ ಜಗದೀಶ್ (42) ಎಂದು ಗುರುತಿಸಲಾಗಿದೆ.
ಆಪೆ ಆಟೋ ಚಾಲಕರಾಗಿದ್ದ ಜಗದೀಶ್ ಅವರ ಮೃತದೇಹವು ಲಕ್ಕೂರು ಅರಣ್ಯ ಪ್ರದೇಶದ ಬಳಿ ಇಂದು 11 ಗಂಟೆ ಸುಮಾರಿಗೆ ಪತ್ತೆಯಾಗಿದೆ. ತಲೆಯ ಪಕ್ಕದಲ್ಲೇ ಕೊಲೆಗೆ ಬಳಸಿರುವ ಕಲ್ಲು ಕೂಡಾ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story





