ವಿದ್ಯಾರ್ಥಿನಿಗೆ ಸ್ಕೂಟರ್ ಢಿಕ್ಕಿ: ಮೂವರಿಗೆ ಗಾಯ
ಮಂಗಳೂರು, ಆ.28: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಸ್ಕೂಟರ್‌ನಲ್ಲಿದ್ದವರು ಸೇರಿದಂತೆ ಮೂವರು ಗಾಯಗೊಂಡ ಘಟನೆ ಶುಕ್ರವಾರ ವಳಚ್ಚಿಲ್ ಜಂಕ್ಷನ್ ಸಮೀಪ ನಡೆದಿದೆ.
ತುಂಬೆಯ ಶೈಹಾ ಹವ್ವಾ ಅವರು ಕಾಲೇಜಿಗೆ ಹೋಗಲು ವಳಚ್ಚಿಲ್ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೆಳಗ್ಗೆ 8:30ರ ವೇಳೆಗೆ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತು. ಪರಿಣಾಮ ಶೈಹಾ ಅವರ ಬಲಗಾಲಿನ ಮೂಳೆ ಮುರಿತದ ಗಾಯವಾಗಿದೆ. ಸ್ಕೂಟರ್ ಸವಾರ ಶ್ರೇಯಸ್ ಮತ್ತು ಸಹಸವಾರೆ ಶಿಲ್ಪ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಇಬ್ಬರಿಗೂ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





