ದಿಲ್ಲಿ ಗಲಭೆ: ಪೊಲೀಸರ ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ
ಲೆ.ಗವರ್ನರ್‌ರಿಂದ ವಿವರಣೆ ಕೇಳಿದ ಹೈಕೋರ್ಟ್
ಹೊಸದಿಲ್ಲಿ, ಸೆ.27: ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿದ ಪ್ರಕರಣಗಳಲ್ಲಿ ದಿಲ್ಲಿ ಪೊಲೀಸರ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಳಾಗಿ ನೇಮಿಸುವ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಿರ್ಧಾರದ ಬಗ್ಗೆ ದಿಲ್ಲಿ ಹೈಕೋರ್ಟ್ ಅವರಿಂದ ವಿವರಣೆಯನ್ನು ಕೇಳಿದೆ.
ದಿಲ್ಲಿ ಪೊಲೀಸರ ಪರವಾಗಿ ವಕೀಲರನ್ನು ನೇಮಿಸುವ ಅನಿಲ್ ಬೈಜಾಲ್ ಅವರ ನಿರ್ಧಾರವ್ನ ಪ್ರಶ್ನಿಸಿ ಆಮ್‌ಆದ್ಮಿ ಸರಕಾರವು ನ್ಯಾಯಾಲಯದ ಮೆಟ್ಟಲೇರಿತ್ತು.
ದಿಲ್ಲಿ ಗಲಬೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿರುವ ವಿಚಾರಣೆಗಳು, ಮನವಿಗಳು, ಜಾಮೀನು ಅರ್ಜಿ ಮತ್ತಿತರ ವಿಷಯಗಳನ್ನು ನಿಭಾಯಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ 11 ನ್ಯಾಯವಾದಿಗಳನ್ನು ನೇಮಿಸುವಂತೆ ಫೆಬ್ರವರಿ 26ರಂದು ದಿಲ್ಲಿ ಪೊಲೀಸರು ದಿಲ್ಲಿ ಸರಕಾರದ ಗೃಹ ಇಲಾಖೆಗೆ ಪತ್ರ ಬರೆದಿದ್ದರು.
ಆದರೆ ದಿಲ್ಲಿ ಪೊಲೀಸರು ಪ್ರಸ್ತಾವಿಸಿದ ನ್ಯಾಯವಾದಿಗಳ ಪಟ್ಟಿಯನ್ನು ಕೇಜ್ರಿವಾಲ್ ನೇತೃತ್ವದ ಸರಕಾರವು ತಿರಸ್ಕರಿಸಿತ್ತು. ದಿಲ್ಲಿ ಸರಕಾರವು ನೇಮಿಸಿದ ಪ್ರಾಸಿಕ್ಯೂಟರ್‌ಗಳ ತಂಡವು ಈ ಪ್ರಕರಣವನ್ನು ನಿಭಾಯಿಸಲಿದೆಯೆಂದು ಅವರು ಹೇಳಿದ್ದರು.ತಾವು ಸಿದ್ಧಪಡಿಸಿರುವ ನ್ಯಾಯವಾದಿಗಳ ಪಟ್ಟಿಯನ್ನು ಅನುಮೋದಿಸುವಂತೆ ದಿಲ್ಲಿ ಪೊಲೀಸರು ಲೆಫ್ಟಿನೆಂಟ್ ಗವರ್ನರ್ ಮೂಲಕ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಆಮ್ ಆದ್ಮಿ ಪಕ್ಷವು ಪ್ರತಿಪಾದಿಸಿದೆ.ದಿಲ್ಲಿ ಪೊಲೀಸರು ಸೂಚಿಸಿದ ನ್ಯಾಯವಾದಿಗಳ ಪಟ್ಟಿಯನ್ನು ಅನುಮೋದಿಸುವುದು ಕಾನೂನಾತ್ಮಕ ಸಮಾನತೆಗೆ ಧಕ್ಕೆಯುಂಟು ಮಾಡಲಿದೆ ಹಾಗೂ ನಿಷ್ಪಕ್ಷಪಾತ ವಿಚಾರಣೆಯನ್ನು ಎದುರಿಸುವ ಹಕ್ಕು ಹೊಂದಿರುವ ಆರೋಪಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆಯೆಂದು ವಾದಿಸಿತ್ತು.
ಆನಂತರ ರಾಜ್ಯಪಾಲರು ಈ ವಿಷಯದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗಮನಕ್ಕೆ ತಂದರು. ರಾಷ್ಟ್ರ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶ (ತಿದ್ದುಪಡಿ) ಕಾಯ್ದೆಯಡಿ ದಿಲ್ಲಿ ಪೊಲೀಸರು ಶಿಫಾರಸು ಮಾಡಿ ನ್ಯಾಯವಾದಿಗಳನ್ನು ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಲು ತನಗಿರುವ ಅಧಿಕಾರವನ್ನು ಚಲಾಯಿಸಿರುವುದಾಗಿ ತಿಳಿಸಿದರು.
ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಈ ತಿದ್ದುಪಡಿ ಕಾಯ್ದೆಯ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಕಾಯ್ದೆಯು ದಿಲ್ಲಿ ಯ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಚುನಾಯಿತ ವಿಧಾನಸಭೆಯ ಅಧಿಕಾರವನ್ನು ತಗ್ಗಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕವು ಮಾಮೂಲಿ ವಿಷಯವಾಗಿದ್ದು, ಅದನ್ನು ರಾಷ್ಟ್ರಪತಿಯವರ ಅವಗಾಹನೆಗೆ ತರಬೇಕಾದ ಅಗತ್ಯವಿಲ್ಲವೆಂದು ಅದು ಹೇಳಿದೆ. ದಿಲ್ಲಿ ಸರಕಾರದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಕ್ರಮವು ಒಕ್ಕೂಟವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾದಿಸಿದ್ದರು.







