ಆ.30ರಿಂದ ಮೆಟ್ರೋ ಫೀಡರ್ ಸಾರಿಗೆ ಸೇವೆ

ಬೆಂಗಳೂರು, ಆ.28: ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆಯನ್ನು ಆ.29ರಿಂದ ಆರಂಭಿಸುತ್ತಿದೆ. ಇದಕ್ಕೆ ಪೂರಕವಾಗಿ ಬಿಎಂಟಿಸಿ ವತಿಯಿಂದ ಆ.30ರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಫೀಡರ್ ಸಾರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ.
ರಾಜರಾಜೇಶ್ವರಿನಗರ ಗೇಟ್‍ನಿಂದ ರಾಜರಾಜೇಶ್ವರಿನಗರದ ಕಡೆಗೆ 22 ಮಾರ್ಗಗಳಲ್ಲಿ 43 ಬಸ್ಸುಗಳಿಂದ 230 ಸುತ್ತುವಳಿಗಳು, ಬೆಂಗಳೂರು ವಿಶ್ವವಿದ್ಯಾಲಯ ಗೇಟ್‍ನಿಂದ ಬೆಂಗಳೂರು ವಿಶ್ವವಿದ್ಯಾಲಯ ಕಡೆಗೆ 14 ಮಾರ್ಗಗಳಲ್ಲಿ 43 ಬಸ್ಸುಗಳಿಂದ 264 ಸುತ್ತುವಳಿಗಳು ಹಾಗೂ ಕೆಂಗೇರಿ ಟಿಟಿಎಂಸಿಯಿಂದ ಉತ್ತರಹಳ್ಳಿ ಕಡೆಗೆ 121 ಬಸ್ಸುಗಳು. ಕೆಂಗೇರಿ ಉಪನಗರದ ಕಡೆಗೆ 266 ಬಸ್ಸುಗಳು, ಕುಂಬಳಗೊಡು ಕಡೆಗೆ 157 ಸಂಚರಿಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





