2019-20ರಲ್ಲಿ ಬಿಜೆಪಿಯ ಆದಾಯ ಶೇ. 50ರಷ್ಟು ಹೆಚ್ಚಳ: ರಾಹುಲ್ ಗಾಂಧಿ

ಹೊಸದಿಲ್ಲಿ, ಅ. 28: ದೊಡ್ಡ ಪ್ರಮಾಣದ ಇಲೆಕ್ಟೋರಲ್ ಬಾಂಡ್ಗಳ ದೇಣಿಗೆಯಿಂದ 2019-20ರಲ್ಲಿ ಆಡಳಿತಾರೂಢ ಬಿಜೆಪಿಯ ಆದಾಯ ಶೇ. 50ರಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
‘‘ಬಿಜೆಪಿಯ ಆದಾಯ ಶೇ. 50ರಷ್ಟು ಹೆಚ್ಚಿದೆ. ನಿಮ್ಮದು ?’’ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಇಲೆಕ್ಟೋರಲ್ ಬಾಂಡ್ಗಳ ಮೂಲಕ ಸಂಗ್ರಹಿಸಿದ ದೇಣಿಗೆಯಿಂದ 2019-20ರಲ್ಲಿ ಬಿಜೆಪಿಯ ಆದಾಯ ಶೇ. 50ರಷ್ಟು ಹೆಚ್ಚಾಗಿದೆ ಎಂದು ಪ್ರತಿಪಾದಿಸುವ ಅಸೋಸಿಯೇಶನ್ ಫಾರ್ ಡಮಾಕ್ರೆಟಿಕ್ ರಿಫಾರ್ಮ್ (ಎಡಿಆರ್)ನ ಅಂಕಿ-ಅಂಶವನ್ನು ಉಲ್ಲೇಖಿಸಿದ ವರದಿಯನ್ನು ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದಾರೆ.
Next Story





