12-15 ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆಗೆ ಬ್ರಿಟನ್ ಸಿದ್ಧತೆ
ಕಾಬೂಲ್,ಆ.28: ಕೊರೋನ ವೈರಸ್ ಸೋಂಕಿನ ವಿರುದ್ಧ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಬ್ರಿಟಿಶ್ ಸರಕಾರ ಗುರುವಾರ ತಿಳಿಸಿದೆ. ಆದರೆ ಈ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಿಕೆಗೆ ತಜ್ಞರ ಅನುಮೋದನೆ ಇನ್ನಷ್ಟೇ ದೊರೆಯಬೇಕಿದೆ.
ಒಮ್ಮೆ ಲಸಿಕೆಗೆ ತಜ್ಞರ ಅನುಮೋದನೆ ದೊರೆತಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಸರ್ವಸನ್ನದ್ಧವಾಗಿರಲು ತಾನು ಬಯಸಿರುವುದಾಗಿ ಅದು ಹೇಳಿದೆ.
ಬ್ರಿಟನ್ನಲ್ಲಿ ಶೈಕ್ಷಣಿಕ ವರ್ಷಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಶಾಲೆಗೆ ಮರಳುವುದರಿಂದ ಕೊರೋನ ಸೋಂಕು ಹರಡುವ ಭೀತಿಯಿದ್ದು, ಈ ನಿಟ್ಟಿನಲ್ಲಿ ತ್ವರಿತವಾಗಿ ಲಸಿಕೆ ಅಭಿಯಾನವನ್ನು ನಡೆಸುವ ಯೋಜನೆ ಹೊಂದಿರುವುದಾಗಿ ಬ್ರಿಟನ್ ಆರೋಗ್ಯ ಇಲಾಖೆ ತಿಳಿಸಿದೆ.
ಅಫ್ಘಾನ್ ನಿಂದ ಬ್ರಿಟಿಷ್ ನಾಗರಿಕರ ತೆರವು ಕಾರ್ಯಾಚರಣೆ ಅಂತ್ಯ
ಅಫ್ಘಾನಿಸ್ತಾನದಿಂದ ನಾಗರಿಕರ ತೆರವು ಕಾರ್ಯಾಚರಣೆಯನ್ನು ಶನಿವಾರ ಕೊನೆಗೊಳಿಸಿರುವುದಾಗಿ ಬ್ರಿಟಿಶ್ ಸೇನಾ ಪಡೆಗಳ ವರಿಷ್ಠ ಜನರಲ್ ನಿಕ್ ಕಾರ್ಟರ್ ತಿಳಿಸಿದ್ದಾರೆ.
ನಾವು ನಾಗರಿಕರ ತೆರವು ಕಾರ್ಯಾಚರಣೆಯ ಅಂತಿಮಘಟ್ಟವನ್ನು ತಲುಪಿದ್ದೇವೆ. ಇದೀಗ ಉಳಿದ ವಿಮಾನಗಳಲ್ಲಿ ನಮ್ಮ ಸೇನಾಪಡೆಗಳನ್ನು ವಾಪಸ್ ತರುವುದು ಅಗತ್ಯವಾಗಿದೆ ಎಂದವರು ಬಿಬಿಸಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಮ್ಮೊಂದಿಗಿದ್ದ ಎಲ್ಲರನ್ನೂ ಕರೆತರಲು ಸಾಧ್ಯವಾಗಿಲ್ಲ. ನಿಜಕ್ಕೂ ಅದು ದುಃಖಕರವಾಗಿದೆ. ಆದವಾಸ್ತವದ ನೆಲೆಗಟ್ಟಿನಲ್ಲಿ ಕೆಲವೊಂದು ಅತ್ಯಂತ ಸವಾಲುದಾಯಕವಾದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದವರು ಹೇಳಿದ್ದಾರೆ.







