ಮಂಗಳೂರು; ಪೊಲೀಸ್ ಇನ್‌ಸ್ಪೆಕ್ಟರ್ ಪುತ್ರನ ಸೈಕಲ್ ಕಳವು
ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು: ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಮನೆ ಆವರಣಕ್ಕೆ ನುಗ್ಗಿದ ದುಷ್ಕರ್ಮಿ ಇನ್‌ಸ್ಪೆಕ್ಟರ್ ಪುತ್ರನ ಸುಮಾರು 25 ಸಾವಿರ ರೂ. ಮೌಲ್ಯದ ಸೈಕಲ್‌ನ್ನು ಕಳವುಗೈದ ಘಟನೆ ನಡೆದಿದೆ.
ಸುರತ್ಕಲ್ ವೃತ್ತ ನಿರೀಕ್ಷಕಾಗಿರುವ ಶರೀಫ್ ಅವರ ಪುತ್ರನ ಸೈಕಲ್‌ನ್ನು ಕಳವು ಗೈಯ್ಯಲಾಗಿದ್ದು, ಆರೋಪಿಯ ಚಹರೆ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಶರೀಫ್ ಅವರು ನಗರದ ಉರ್ವ ಮಾರುಕಟ್ಟೆ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಅವರು ಫ್ಲ್ಯಾಟ್ ಹೊಂದಿದ್ದು, ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಇರಿಸಲಾಗಿದ್ದ ಸೈಕಲ್‌ನ್ನು ಕಳವುಗೈಯ್ಯಲಾಗಿದೆ. ಇದೇ ಶಂಕಿತ ಆರೋಪಿ ಪಕ್ಕದ ಇನ್ನೊಂದು ಅಪಾರ್ಟ್‌ಮೆಂಟ್ ಒಳಗೂ ನುಗ್ಗಿದ್ದು, ಅಲ್ಲಿ ಕಳವಿಗಾಗಿ ಹುಟುಕಾಟ ನಡೆಸಿದ್ದಾನೆ. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





