ಪ್ರಕೃತಿ-ಸಂಸ್ಕೃತಿ ಸಂಬಂಧಕ್ಕೆ ಆಟಿ ಸಂಕೇತ: ಡಾ.ಸಂಕಮಾರ್
ಉಡುಪಿ, ಆ.29: ಪ್ರಕೃತಿ ಮತ್ತು ಸಂಸ್ಕೃತಿಯ ನಡುವೆ ಅವಿನಾಭಾವ ಸಂಬಂಧವಿದೆ. ವಾಸ್ತವವಾಗಿ ಪ್ರಕೃತಿಯೇ ಸಂಸ್ಕೃತಿಯ ವಿಚಾರಗಳನ್ನು ನಿರ್ಧರಿ ಸುತ್ತದೆ. ಇದಕ್ಕೆ ಆಟಿ ಆಚರಣೆ ಮತ್ತು ನಂಬಿಕೆಗಳು ಒಳ್ಳೆಯ ಸಂಕೇತ. ಕರಾವಳಿಯ ಬೆಟ್ಟ, ಗುಡ್ಡ, ಮಳೆ, ಕೃಷಿ ಸಂಸ್ಕೃತಿ, ಆಟಿ ತಿಂಗಳ ನಂಬಿಕೆ ಮತ್ತು ಆಚರಣೆಗಳನ್ನು ನಿರ್ಧರಿಸಿವೆ ಎಂದು ಮಂಗಳೂರು ವಿಶ್ವವಿದ್ಯಾನಿಯದ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದ್ದಾರೆ.
ತುಳುಕೂಟ ಉಡುಪಿ, ಸಿರಿ ತುಳು ಚಾವಡಿ ಹಾಗೂ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಆಟಿ ತುಲಿಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಆಷಾಡದಲ್ಲಿ ಪ್ರಕೃತಿ-ಸಂಸ್ಕೃತಿಗಿರುವ ಸಂಬಂಧವನ್ನು ಅವರು ಉದಾಹರಣೆಗಳ ಸಹಿತ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ಸಿರಿ ಚಾವಡಿಯ ಕಾರ್ಯಾಧ್ಯಕ್ಷ ಈಶ್ವರ ಚಿಟ್ಪಾಡಿ ಸ್ವಾಗತಿಸಿದರು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ತುಳು ಅಕಾಡೆು ಸದಸ್ಯ ಶಶಿಧರ ಶೆಟ್ಟಿ ನಿಟ್ಟೆ, ಕುಡ್ಲ ಟೈಂಸ್ ಪತ್ರಿಕೆಯ ಯಶೋಧ ಕೇಶವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ.ದುಗ್ಗಪ್ಪ ಕಜೆಕಾರ್ ವಂದಿಸಿದರೆ, ಉಪನ್ಯಾಸಕ ದಯಾನಂದ ಕುಮಾರ್ ಯು. ಕಾರ್ಯಕ್ರಮ ನಿರ್ವಹಿಸಿದರು.







