ಉಡುಪಿ ಧರ್ಮಪ್ರಾಂತ ವತಿಯಿಂದ ಇಂಡಿಯನ್ ಐಡಲ್ ತಾರೆ ನಿಹಾಲ್ ತಾವ್ರೋಗೆ ಸನ್ಮಾನ

ಉಡುಪಿ, ಆ.29: ನಿಹಾಲ್ ತಾವ್ರೋ ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಇಂಡಿಯನ್ ಐಡಲ್‌ನ ಫೈನಲ್ ಹಂತ ತಲುಪುವ ಮೂಲಕ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ರವಿವಾರ ಉಡುಪಿಯಲ್ಲಿ ಉಡುಪಿ ಧರ್ಮಪ್ರಾಂತದ ವತಿಯಿಂದ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋ ಅವರನ್ನು ಅಭಿನಂದಿಸಿ ಬಿಷಪ್ ಮಾತನಾಡುತಿದ್ದರು.
ನಿಹಾಲ್ ಏಕಾಏಕಿಯಾಗಿ ಈ ಹಂತಕ್ಕೆ ತಲುಪಿಲ್ಲ. ಬದಲಾಗಿ ತಮಗೆ ಸಿಕ್ಕಿದ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಂಡು ಮುಂದುವರಿದು ಈ ಹಂತ ತಲುಪಿದ್ದಾರೆ. ನಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಕಠಿಣ ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂಬು ದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು.
ನಿಹಾಲ್ ಏಕಾಏಕಿಯಾಗಿ ಈ ಹಂತಕ್ಕೆ ತಲುಪಿಲ್ಲ. ಬದಲಾಗಿ ತಮಗೆ ಸಿಕ್ಕಿದ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಂಡು ಮುಂದುವರಿದು ಈ ಹಂತ ತಲುಪಿದ್ದಾರೆ. ನಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಕಠಿಣ ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಹಾಲ್ ತಾವ್ರೊ, ತಾನು ಸಂಗೀತದ ಯಾತ್ರೆ ಪ್ರಾರಂಭಿಸಿದ್ದು ಚರ್ಚ್ ಹಂತದಿಂದ. ಚರ್ಚಿನ ಗಾಯನ ಪಂಗಡದಲ್ಲಿ ತನಗೆ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಮುಂದುವರೆದು ಇಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಮನುಷ್ಯನಿಗೆ ಅವಕಾಶ ಗಳು ಲಭಿಸುತ್ತವೆ ಆದರೆ ಅದನ್ನು ಬಳಸಿಕೊಳ್ಳಬೇಕು ಈ ಮೂಲಕ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಇದೇ ವೇಳೆ ಧರ್ಮಪ್ರಾಂತದ ವಿವಿಧ ಸಂಘಟನೆಗಳು, ಧರ್ಮಗುರುಗಳು ನಿಹಾಲ್ ಅವರನ್ನು ಗೌರವಿಸಿದರು. ವೇದಿಕೆಯಲ್ಲಿ ನಿಹಾಲ್ ಅವರ ತಂದೆ ಹೆರಾಲ್ಡ್ ತಾವ್ರೋ, ತಾಯಿ ಪ್ರೆಸಿಲ್ಲಾ ತಾವ್ರೋ, ಸಹೋದರ ನಿಶಾನ್ ತಾವ್ರೋ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ನಿವೃತ್ತ ಧರ್ಮಗುರು ವಂ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.
ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರು ವಂ.ಚಾಲ್ಸರ್ ಮಿನೇಜಸ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.







